Karnataka

Bangalore Urban

CC/50/2022

SRI. THIMMAPPA.U, - Complainant(s)

Versus

The Manager, AXIX BANK - Opp.Party(s)

Eshwar Prasad

23 Nov 2022

ORDER

DISTRICT CONSUMER DISPUTES REDRESSAL COMMISSION,
8TH FLOOR, B.W.S.S.B BUILDING, K.G.ROAD,BANGALORE-09
 
Complaint Case No. CC/50/2022
( Date of Filing : 14 Feb 2022 )
 
1. SRI. THIMMAPPA.U,
S/O Maregowda, Aged about 28 years, Residing at No.04, 1st main, 12th cross, Sampangiramnagar Bengaluru-560027
...........Complainant(s)
Versus
1. The Manager, AXIX BANK
Malleshwaram Branch, No.148, Sri sai Sampada, sampige road, Bengaluru-562125
............Opp.Party(s)
 
BEFORE: 
 HON'BLE MRS. M. SHOBHA PRESIDENT
 HON'BLE MS. Renukadevi Deshpande MEMBER
 
PRESENT:
 
Dated : 23 Nov 2022
Final Order / Judgement
ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಂಗಳೂರು
ಉಪಸ್ಥಿತಿ: 1. ಶ್ರೀಮತಿ ಎಂ.ಶೋಭಾ  ಅಧ್ಯಕ್ಷರು,
         2. ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ, ಮಹಿಳಾ ಸದಸ್ಯರು,
 
ಆದೇಶ 
 
ಸಿ.ಸಿ.ಸಂಖ್ಯೆ:50/2022
ಆದೇಶ ದಿನಾಂಕ 23ನೇ ನವೆಂಬರ್ 2022
ಶ್ರೀ ತಿಮ್ಮಪ್ಪ, ಯು,
ಬಿನ್.ಮರೇಗೌಡ, 28 ವರ್ಷ,
ನಂ.4, 1ನೇ ಮೇನ್, 12ನೇ ಕ್ರಾಸ್, ಸಂಪಂಗಿರಾಮನಗರ,
 ಬೆಂಗಳೂರು 560 027.
 
(ಶ್ರೀ ಕೇಶವ ಹೆಚ್, ವಕೀಲರು)                                   
 
 
-ಪಿರ್ಯಾದುದಾರರು
       ವಿರುದ್ಧ
ವ್ಯವಸ್ಥಾಪಕರು,
ಆಕ್ಸಿಸ್ ಬ್ಯಾಂಕ್,
ಮಲ್ಲೇಶ್ವರಂ ಶಾಖೆ,
ನಂ.148, ಶ್ರೀ ಸಾಯಿ ಸಂಪದ,
ಸಂಪಿಗೆ ರಸ್ತೆ, ಬೆಂಗಳೂರು 560 003.
 
(ಶ್ರೀ ಮೋಹನ ಮಾಳಿಗೆ, ವಕೀಲರು)
 
… ಎದುರುದಾರರು
 
ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ 
ಮಹಿಳಾ ಸದಸ್ಯರು,
 
1. ದೂರುದಾರರು ಎದುರುದಾರರ ವಿರುದ್ಧ ಗ್ರಾಹಕರ ಸಂರಕ್ಷಣಾ ಕಾಯ್ದೆ 2019 ರ ಕಲಂ 35 ರ ಅಡಿಯಲ್ಲಿ ದೂರನ್ನು ಸಲ್ಲಿಸಿದ್ದು, ಎದುರುದಾರರಿಂದ ರೂ.17,811/- ಎರಡು ಖಾತೆಗಳಲ್ಲಿ ಇಎಂಐ ಎರಡು ಸಾರಿ ಪಾವತಿಸಿದ್ದು, ಮತ್ತು ರೂ.5,000/- ಪ್ರಯಾಣ ಮತ್ತು ಮಾನಸಿಕ ಹಿಂಸೆಗಾಗಿ, ನ್ಯಾಯಾಲಯದ ಖರ್ಚು ರೂ.5,000/- ಗಳನ್ನು ಒಟ್ಟು ರೂ.27,811/- ಗಳನ್ನು ಶೇಕಡ 12ರ ಬಡ್ಡಿಯಂತೆ ಸೇರಿಸಿ ಕೊಡಲು ನಿರ್ದೇಶಿಸಬೇಕೆಂದು ಕೋರಿರುತ್ತಾರೆ;
2. ದೂರುದಾರನ ದೂರಿನ ಅಂಶಗಳು ಈ ಕೆಳಗಿನಂತೆ ಇರುತ್ತವೆ:-
ಎದುರುದಾರರು ಆನ್‍ಲೈನ್ ಮೂಲಕ ಸಂದೇಶವನ್ನು ಕಳುಹಿಸಿದ ನಂತರ ದೂರುದಾರರು ಎದುರುದಾರರಿಂದ ಲಭ್ಯವಿರುವ ವೈಯುಕ್ತಿಕ ಸಾಲ ಮತ್ತು ಕಡಿಮೆ ಬಡ್ಡಿ ದರ 14.50% ಖಾತರಿಪಡಿಸಿಕೊಂಡು ದೂರುದಾರನು ರೂ.5,31,000/- ಗಳಿಗೆ ವೈಯುಕ್ತಿಕ ಸಾಲವನ್ನು ಮಂಜೂರು ಮಾಡಲು ಮತ್ತು ಸಾಲ ಪಡೆಯಲು ಬೇಕಾದ ದಾಖಲಾತಿಗಳನ್ನು ಒದಗಿಸಿದ ನಂತರ ಎದುರುದಾರರು ದೂರುದಾರರ ಸಿಬಿಲ್ ಸ್ಕೋರ್ ಅನ್ನು ಪರಿಶೀಲಿಸಿ ಖಾತೆ ನಂ.ಪಿಪಿಆರ್‍ಓ22706934280 ಎರಡನೇಯ ಹೊಸ ಸಾಲವನ್ನು ಜನವರಿ 2022ರಲ್ಲಿ ಮಂಜೂರು ಮಾಡಿ ಸಾಲದ ಮೊತ್ತವನ್ನು ಆನ್‍ಲೈನ್ ಮೂಲಕ ವರ್ಗಾಯಿಸಿ ಮಂಜೂರು ಮಾಡಿದ ದಿನಾಂಕದಿಂದ 59 ಕಂತುಗಳಲ್ಲಿ ಪ್ರತಿ ತಿಂಗಳು ರೂ.11,545/- ರಂತೆ ಸಾಲ ಮರುಪಾವತಿಸಲು ಕರಾರು ಒಪ್ಪಂದ ಮಾಡಿಕೊಂಡಿದ್ದು ಅಲ್ಲದೆ ಈ ಹಿಂದೆ ಎದುರುದಾರರಿಂದ ವೈಯುಕ್ತಿಕ ಸಾಲ ರೂ.5,00,000/- ಗಳನ್ನು 1ನೇ ಸಾಲದ ಖಾತೆ ನಂ.ಪಿಪಿಆರ್‍ಓ22706507615 ಮೂಲಕ ಸಾಲ ಪಡೆದು ರೂ.11.750/- ರಂತೆ ಮೂರು ಕಂತುಗಳನ್ನು ಕಟ್ಟಿದ್ದು, ಒಟ್ಟು ರೂ.35,250/- ಗಳನ್ನು ಪಾವತಿಸಿದ್ದು ಉಳಿದ ಬಾಕಿ ಮೊತ್ತಕ್ಕೆ ಎರಡನೇ ಖಾತೆಯಲ್ಲಿ ಪಡೆದ ಸಾಲದಲ್ಲಿ ರೂ.5,31,000/- ಗಳಲ್ಲಿ ಸಂಸ್ಕರಣಾ ಶುಲ್ಕ ರೂ.6,266/- ಗಳನ್ನು ಕಡಿತಗೊಳಿಸಿ ಬಾಕಿ ಉಳಿದ ಮೊತ್ತಕ್ಕೆ ರೂ.5,24,734/- ಸಾಲಕ್ಕೆ ಈ ಹಿಂದೆ ಪಡೆದ ಸಾಲದಲ್ಲಿ ರೂ.5,00,000/- ಗೆ ಮೂರು ಕಂತು ಕಟ್ಟಿದ ಮೊತ್ತವನ್ನು ರೂ.35,250/- ಕಡಿತಗೊಳಿಸಿ ಉಳಿದ ಬಾಕಿಯಲ್ಲಿ ರೂ.5,00,000/-                                                                                                                                                                                                                                                                                                                                                                                                                                                                                                                                                                                                                                                                  ಕಡಿತಗೊಳಿಸಿ ಖಾತೆ ನಂ.ಪಿಪಿಆರ್‍ಓ22706576615 ಗೆ ಯಾವುದೇ ಬಾಕಿ ಇಲ್ಲ ಆದರೆ ದೂರುದಾರರು ಉಳಿದ ಸಾಲದ ಮೊತ್ತವನ್ನು ತೆರವುಗೊಳಿಸಿದ ನಂತರ ಎದುರುದಾರರು ಕ್ಲಿಯರೆನ್ಸ್ ಪ್ರಮಾಣ ಪತ್ರವನ್ನು ನೀಡಿಲ್ಲವೆಂದು ಅಪವಾದಿಸಿದ್ದು, ಮತ್ತು ಎದುರುದಾರರ ನಿರ್ಲಕ್ಷ್ಯತನದಿಂದ ದೂರುದಾರರು ರೂ.6,266/- ಸಂಸ್ಕರಣಾ ಶುಲ್ಕವನ್ನು ಕಳೆದುಕೊಂಡಿದ್ದಾರೆ ಮತ್ತು ರೂ.11,545/- ಒಂದೇ ತಿಂಗಳಲ್ಲಿ ಇಎಂಐ ಎರಡು ಸಲ ಪಾವತಿಸಿದ್ದು, ಎರಡು ಖಾತೆಗಳಿಂದ ಒಟ್ಟು ರೂ.17,811/- ನಷ್ಟವಾಗಿದೆ ಎಂದು ಸತತ ಪ್ರಯತ್ನ ಮಾಡಿದರೂ ಬ್ಯಾಂಕಿನ ಅಧಿಕಾರಿಗಳು ಭರವಸೆ ನೀಡಿದರೂ ಎದುರುದಾರರು ದೂರುದಾರರ ಯಾವುದೇ ಕ್ರಮ ಕೈಗೊಳ್ಳದೇ ಎದುರುದಾರರು ವಿಫಲರಾಗಿದ್ದಾರೆಂದು ಸೇವಾ ನ್ಯೂನತೆ ಎಸಗಿದ್ದಾರೆಂದು ಈ ಆಯೋಗಕ್ಕೆ ದೂರು ಸಲ್ಲಿಸಿ ಎದುರುದಾರರಿಂದ ಪರಿಹಾರ ಕೋರಿರುತ್ತಾರೆ. 
3. ದೂರುದಾರರು ಈ ಆಯೋಗಕ್ಕೆ ದೂರು ಸಲ್ಲಿಸಿದ ನಂತರ ಎದುರುದಾರರಿಗೆ ನೋಟೀಸು ಜಾರಿಮಾಡಿದ್ದು, ಎದುರುದಾರರು ನೋಟೀಸ್ ಪಡೆದುಕೊಂಡು ಈ ಆಯೋಗಕ್ಕೆ ಹಾಜರಾಗಿ ತಕರಾರನ್ನು ಮತ್ತು ದಾಖಲೆಗಳನ್ನು ಹಾಜರುಪಡಿಸಿ ತಕರಾರಿನ ಅಂಶಗಳು ಈ ರೀತಿ ಇರುತ್ತದೆ.
4. ದೂರುದಾರರು ಸುಳ್ಳನ್ನು ನಿಗ್ರಹಿಸುವುದರಿಂದ ಮತ್ತು ಸತ್ಯಸಂಗತಿಗಳನ್ನು ಸೂಚಿಸದೇ ಇರುವುದರಿಂದ ದೂರನ್ನು ನಿರ್ವಹಿಸಲು ಸಾಧ್ಯವಿಲ್ಲವೆಂದು ದೂರನ್ನು ವಜಾಗೊಳಿಸಬೇಕೆಂದು, ದೂರುದಾರರು ಉದ್ದೇಶಪೂರ್ವಕವಾಗಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆಂದು ಮತ್ತು ಕಾನೂನು ಬಾಹಿರ ಲಾಭಗಳನ್ನು ಪಡೆದುಕೊಳ್ಳುವ ಮತ್ತು ಬಾಕಿ ಮೊತ್ತದ ಪಾವತಿಯ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ದುರುದ್ದೇಶದಿಂದ ದೂರುದಾರರು ಶುದ್ದ ಹಸ್ತದಿಂದ ಬಂದಿಲ್ಲ. ಸಾಲದ ಸೌಲಭ್ಯವನ್ನು ನಿಯಮಗಳ ಪ್ರಕಾರ ಪಾವತಿಸಿಲ್ಲವೆಂದು ಅದೇ ದೃಷ್ಠಿಯಿಂದ ದೂರನ್ನು ವಜಾಗೊಳಿಸಬೇಕೆಂದು ಒಪ್ಪಂದ ನಿಯಮಗಳಿಗೆ ಅನುಸಾರವಾಗಿ ಸಾಲಗಾರರು ಸಾಲದ ಮೊತ್ತವನ್ನು ಕಟ್ಟುನಿಟ್ಟಾಗಿ ಮರುಪಾವತಿಸಲು ಬದ್ದರಾಗಿರುತ್ತಾರೆಂದು, ಸಾಲದ ಅರ್ಜಿಯ ದಾಖಲೆಗಳೊಂದಿಗೆ ಮರುಪಾವತಿಯ ವೇಳಾಪಟ್ಟಿ ಮತ್ತು ದೂರುದಾರರು ಮತ್ತು ಎದುರುದಾರರು ಬ್ಯಾಂಕಿನ ನಡುವೆ ನವೀಕರಿಸಲಾದ ಸಾಲದ ಒಪ್ಪಂದವನ್ನು ಅನುಬಂದ 6 ಹಾಜರುಪಡಿಸಿದ್ದಾರೆ. ಸಾಲವನ್ನು ಪಡೆಯುವ ಸಂಧರ್ಬದಲ್ಲಿ ದೂರುದಾರರಿಗೆ ಸಂಸ್ಕರಣಾ ಶುಲ್ಕವನ್ನು ವಿಧಿಸಲಾಗಿದೆ ಮತ್ತು ದೂರುದಾರರು ಶುಲ್ಕಗಳ ಬಗ್ಗೆ ತಿಳಿದಿದ್ದರೂ ಪಾವತಿಸಿದ ನಂತರ ಸೌಲಭ್ಯ ನಿಯಮಗಳನ್ನು ಒಪ್ಪಿಕೊಂಡು ನಂತರ ಸಾಲವನ್ನು ಮಂಜೂರು ಮಾಡಲಾಯಿತು. ಸಾಲದ ಒಪ್ಪಂದದ ಅನುಬಂಧ 6 ರಲ್ಲಿ ದಾಖಲೆ ಮಾಡಲಾದ ದೂರುದಾರರ ನಿರ್ದೆಶನದಲ್ಲಿ ಮತ್ತು ಮೊದಲ ಸಾಲವನ್ನು ಪಾವತಿಯಾದ ಮೊದಲ ಮೂರು ಕಂತುಗಳನ್ನು ಪರಿಗಣನೆಯ ನಂತರ ಅದೇ ಪೂರ್ವ ಮುಚ್ಚಲಾಯಿತು. ಆದಾಗ್ಯೂ ದೂರುದಾರನು ತಾನು ಎರಡನೇ ಸಾಲವನ್ನು ಎಂದಿಗೂ ಅರ್ಜಿಯನ್ನು ಹಾಕಲಿಲ್ಲವೆಂಬ ನೆಪದಲ್ಲಿ ರೂ.11,545/- ಮತ್ತು ಸಂಸ್ಕರಣಾ ಶುಲಕ್ ರೂ.6,266/- ಒಟ್ಟು ಮೊತ್ತ ರೂ.17,811/-. ಒಂದು ಇಎಂಐ ಕಂತನ್ನು ಮತ್ತು ಸಂಸ್ಕರಣಾ ಶುಲ್ಕವನ್ನು ಮರುಪಾವತಿಸಲು ಕೋರಿರುತ್ತಾರೆ. ಎದುರುದಾರರು ಕಾರ್ಯಲಯ ಒಪ್ಪಂದದ ನಿಯಮಗಳಲ್ಲಿರುವ ಕಾರಣ ಸೇವಾ ನ್ಯೂನತೆ ಕೊರತೆಯಿಂದ ಆರೋಪ ಉದ್ಭವಿಸುವುದಿಲ್ಲ ಮತ್ತು ತನಗೆ ಉಂಟಾದ ನಷ್ಟವನ್ನು ರುಜುವಾತುಪಡಿಸಲು ದಾಖಲೆಯನ್ನು ಹಾಜರುಪಡಿಸಿರುವುದಿಲ್ಲ ಎಂದು ಅಗತ್ಯ ಕಂಡುಬಂದಲ್ಲಿ ಕ್ಷಮಿಸುವ /ಪ್ಯರಾಗ್ರಾಫ್‍ಗಳ ವಿವಾದಗಳನ್ನು ಸೇರಿಸಲು /ಅಳಿಸಲು/ಮಾರ್ಪಡಿಸಲು/ಪೂರಕಳಿಸಲು ಈ ಆಯೋಗದ ಮುಂದೆ ಕೋರಿರುತ್ತಾರೆ. ಮತ್ತು ವ್ಯಾಜ್ಯಗಳ ಖರ್ಚಿನೊಂದಿಗೆ ದೂರನ್ನು ವಜಾಗೊಳಿಸಬೇಕೆಂದು ಪ್ರಾರ್ಥಿಸಿರುತ್ತಾರೆ. 
ಸೂಚನೆ: ಉಲ್ಲೇಖ(ಸೈಟೇಷನ್) ಗಳನ್ನು ಹಾಕಿರುತ್ತಾರೆ, ಆದರೆ ವಿವರಗಳನ್ನು ಒದಗಿಸಿರುವುದಿಲ್ಲ. 
5. ದೂರುದಾರರು ಆಯೋಗಕ್ಕೆ ಹಾಜರಾಗಿ ಪ್ರಮಾಣ ಪತ್ರದ ಮೂಲಕ ಸಾಕ್ಷ್ಯವನ್ನು ಸಲ್ಲಿಸಿ ನಿಶಾನೆ ಪಿ.1 ರಿಂದ ಪಿ6 ಎಂದು ಗುರುತಿಸಲಾಗಿದೆ ಎದುರುದಾರರು ಲಿಖಿತ ತಕರಾರನ್ನು ಸಲ್ಲಿಸಿರುತ್ತಾರೆ ಹಾಗೂ ದಾಖಲೆಗಳನ್ನು ಹಾಜರುಪಡಿಸಿರುತ್ತಾರೆ ಆದರೇ ನುಡಿಸಾಕ್ಯವನ್ನು ನೀಡಿರುವುದಿಲ್ಲ.  ದಾಖಲೆಗಳ ಮತ್ತು ಅರ್ಹತೆಯ ಮೇರೆಗೆ ತೀರ್ಪಿಗಾಗಿ ಇಡಲಾಗಿದೆ. 
6. ಈ ಕೆಳಕಂಡ ಅಂಶಗಳು ನಮ್ಮ ತೀರ್ಮಾನಕ್ಕಾಗಿ ಮೂಡಿ ಬಂದಿವೆ.
(1) ದೂರುದಾರನು ಎದುರುದಾರರ ಕರ್ತವ್ಯ ಲೋಪ, ಅನುಚಿತ ವ್ಯಾಪಾರ ಪದ್ಧತಿಯನ್ನು ಅನುಸರಿಸಿ ಮತ್ತು ಸೇವಾ ನ್ಯೂನ್ಯತೆ ಎಸಗಿದ್ದಾರೆ ಎನ್ನುವ ಸಂಗತಿಯನ್ನು ಸಾಬೀತು ಪಡಿಸಿದ್ದಾರೆಯೇ? ಹಾಗಿದ್ದಲ್ಲಿ ಆತ ಕೇಳಿಕೊಂಡ ಪರಿಹಾರಕ್ಕೆ ಅರ್ಹರೇ? 
(2) ಆದೇಶ ಏನು?
7. ಮೇಲ್ಕಂಡ ಅಂಶಗಳನ್ನು ಈ ಕೆಳಕಂಡ ಕಾರಣಕ್ಕಾಗಿ ಈ ರೀತಿ ನಿರ್ಣಯಿಸಿದ್ದೇವೆ.
1ನೇ ಅಂಶ - ಭಾಗಶ: ಸಕಾರಾತ್ಮಕವಾಗಿ
2ನೇ ಅಂಶ - ಅಂತಿಮ ತೀರ್ಪಿನ ಪ್ರಕಾರ
 
ಕಾರಣಗಳು
8. 1 ನೇ ಅಂಶದ ಮೇಲೆ:- ಪ್ರಸ್ತುತ ಪ್ರಕರಣದಲ್ಲಿ ದೂರುದಾರರು ಮತ್ತು ಎದುರುದಾರರು ತಮ್ಮ ದೂರಿನಲ್ಲಿ/ತಕರಾರಿನಲ್ಲಿ ಹೇಳಿದ ಸಮಗ್ರ ಮಾಹಿತಿಯನ್ನು ಸಂಕ್ಷಿಪ್ತವಾಗಿ ಈಗಾಗಲೇ ವಿವರಿಸಲಾಗಿದೆ. ಉಭಯತ್ರರು ಒಪ್ಪಿಕೊಂಡಿರುವ ಅಂಶವನ್ನು ಪುನ: ವಿಮರ್ಶಿಸುವ ಅವಶ್ಯಕತೆ ಇರುವುದಿಲ್ಲ. ಆದಕಾರಣ ದೂರುದಾರರಲ್ಲಿ ಮತ್ತು ಎದುರುದಾರರಲ್ಲಿ ಉಂಟಾದ ವಿವಾದ ಅಂಶಗಳನ್ನು ಮಾತ್ರ ಇಲ್ಲಿ ಗಣನೆಗೆ ತೆಗೆದುಕೊಂಡು ದೂರುದಾರರು ಮತ್ತು ಎದುರುದಾರರು ಒಂದು ಮತ್ತು ಎರಡನೇ ಸಾಲ ಕುರಿತು ವಿವರಿಸಲಾಗಿದೆ. 
9. ದೂರುದಾರನ ದೂರನ್ನು ಸಾಬೀತುಪಡಿಸಲು ನುಡಿಸಾಕ್ಷ್ಯವನ್ನು ಮತ್ತು ನಿಶಾನೆ 1 ರಿಂದ 6 ಅನ್ನು ಹಾಜರುಪಡಿಸಿರುತ್ತಾರೆ. ಆದರೆ ಎದುರುದಾರರು ನುಡಿಸಾಕ್ಷ್ಯವನ್ನು ಹಾಜರುಪಡಿಸದೇ ತಕರಾರಿನಲ್ಲಿ ಅಲ್ಲಗಳೆಯಲು ಅವಕಾಶಗಳು ಇಲ್ಲದ ಕಾರಣ ದಾಖಲೆಗಳ ಆಧಾರದ ಮೇಲೆ ವಿವಾದವನ್ನು ವಿಮರ್ಶಿಸಲಾಗಿದೆ. ದೂರುದಾರರು ಎದುರುದಾರರಿಂದ ಸಾಲವನ್ನು ಪಡೆದುಕೊಂಡಿದ್ದು, ಒಂದು ಮತ್ತು ಎರಡನೇ ಸಾಲದ ಖಾತೆಯಲ್ಲಿ ಕಂತಿನ ಮೂಲಕ ಸಾಲವನ್ನು ಕಟ್ಟಿರುವಾಗ ಎರಡೂ ಖಾತೆಯಲ್ಲಿ ಒಂದೇ ತಿಂಗಳಲ್ಲಿ ಎರಡೂ ಸಲ ಇಎಂಐ ಅನ್ನು ಕಡಿತಗೊಳಿಸಿ ದೂರುದಾರರಿಗೆ ಹಣಕಾಸಿನ ನಷ್ಟವನ್ನು ಎಸಗಿದ್ದಾರೆಂದು ನಿಶಾನೆ ಪಿ3ರಲ್ಲಿ ಖಾತೆ ನಂ.1 ಒಪ್ಪಂದದ ಕರಾರಿನಂತೆ ದಿನಾಂಕ 05.10.2021ರಿಂದ 05.05.2022ರವರೆಗೆ ಕಂತುಗಳನ್ನು ಕಟ್ಟಿ ಸಾಲವನ್ನು ಮುಕ್ತಾಯಗೊಳಿಸಿ ತಿಂಗಳಿಗೆ ರೂ.11,764/- ರಂತೆ 05.01.2022ರವರೆಗೆ ರೂ.10,648/- ಪಾವತಿಸಿದ್ದು, ಖಾತೆ ನಂ.ಪಿಪಿಆರ್‍ಓ227065076615ರಂತೆ ನಿಶಾನೆ ಪಿ6ರಲ್ಲಿ ದಿನಾಂಕ 05.01.2022 ಹೊಸ ಖಾತೆಯಲ್ಲಿ ನಿಶಾನೆ ಪಿ6 ರಂತೆ ಪುನ: 05.01.2022ರಂದು ರೂ.11,764/- ಕಡಿತಗೊಳಿಸಿದ್ದು, ಮತ್ತು ದಿನಾಂಕ 10.01.2022ರಂತೆ ರೂ.11,545/- ಅನ್ನು ಕಡಿತಗೊಳಿಸಿದ್ದು, ಒಂದೇ ತಿಂಗಳಲ್ಲಿ ಎರಡು ಇಎಂಐಗಳನ್ನು ಕಡಿತಗೊಳಿಸಿದ್ದು, ಇದರಿಂದ ದೂರುದಾರರಿಗೆ ಹಣಕಾಸಿನ ನಷ್ಟ ಅನುಭವಿಸಿದ್ದು, ಆದರೆ ಎದುರುದಾರರು ಇದನ್ನು ಅಲ್ಲಗಳೆದಿಲ್ಲ, ಆದಕಾರಣ ದೂರುದಾರರು ಹೇಳಿದ ಸಂಗತಿಯು ಸತ್ಯವೆಂದು ಅಭಿಪ್ರಾಯಕ್ಕೆ ಬಂದಿದ್ದು, ಸಂಸ್ಕರಣಾ ಶುಲ್ಕ ಕಾನೂನು ಬದ್ಧವಾದ ಕಾರಣ ಮತ್ತು ಉಭಯೇತರರು ಸಾಲದ ಕರಾರು ಪತ್ರದಲ್ಲಿ ಒಪ್ಪಕೊಂಡಿರುವುದರಿಂದ ಸಂಸ್ಕರಣಾ ಶುಲ್ಕವನ್ನು ಮರುಪಾವತಿಸಲು ಬರುವುದಿಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದು, ದೂರುದಾರರು ಹೇಳಿಕೊಂಡ ಸಂಗತಿ ನಿಜವೆಂಬ ಅಭಿಪ್ರಾಯಕ್ಕೆ ಬಂದಿದ್ದು, ದೂರುದಾರರು ಕೇಳಿಕೊಂಡಿರುವಂತೆ ರೂ.11,545/- ಮರುಪಾವತಿಸುವಂತೆ ಮತ್ತು ಪರಿಹಾರ ರೂಪವಾಗಿ ಶೇಕಡ 6ರ ಬಡ್ಡಿಯಂತೆ ಮರುಪಾವತಿಯಾಗುವವರೆಗೆ ಕೊಡಬೇಕೆಂದು ಮತ್ತು ಮಾನಸಿಕ ಹಿಂಸೆ ಮತ್ತು ಪ್ರಯಾಣದ ಖರ್ಚು ರೂ.5,000/- ಹಾಗೂ ನ್ಯಾಯಲಯದ ಖರ್ಚು ರೂ.5,000/- ಗಳನ್ನು ಕೊಡಬೇಕೆಂದು ನಿರ್ಣಯಿಸಿದ್ದೇವೆ. ಈ ಕಾರಣಕ್ಕಾಗಿ 1ನೇ ಅಂಶವನ್ನು ಭಾಗಶ: ಸಕಾರಾತ್ಮಕ ಎಂದು ತೀರ್ಮಾನಿಲಾಗಿದೆ. 
10. 2ನೇ ಅಂಶದ ಮೇಲೆ:- 1ನೇ ಅಂಶದಲ್ಲಿ ಕೊಟ್ಟಿರುವ ನಿರ್ಣಯಕ್ಕೆ ಅನುಗುಣವಾಗಿ ಈ ಕೆಳಕಂಡ ಆದೇಶವನ್ನು ಮಾಡಿದ್ದೇವೆ.
ಆದೇಶ
1. ಗ್ರಾಹಕ ಸಂರಕ್ಷಣಾ ಕಾಯಿದೆ 2019ರ ಕಲಂ 35ರ ಅನ್ವಯ ದೂರನ್ನು ಭಾಗಶ: ಪುರಸ್ಕರಿಸಲಾಗಿದೆ.
2. ಎದುರುದಾರರು ದೂರುದಾರರಿಗೆ ರೂ.11,545/- ಗಳನ್ನು ಶೇಕಡ 6ರ ಬಡ್ಡಿಯಂತೆ ಪರಹಾರ ರೂಪವಾಗಿ ಈ ದೂರು ಸಲ್ಲಿಸಿದ ದಿನಾಂಕದಿಂದ ಮರುಪಾವತಿಸುವವರೆಗೆ ಪಾವತಿಸಲು ಆದೇಶಿಸುತ್ತೇವೆ.
3. ಎದುರುದಾರರು ಮಾನಸಿಕ ಹಿಂಸೆ ಮತ್ತು ಪ್ರಯಾಣದ ಖರ್ಚು ರೂ.5,000/- ಗಳನ್ನು ಮತ್ತು ನ್ಯಾಯಾಲಯದ ಖರ್ಚು ರೂ.5,000/- ಗಳ ಖರ್ಚುಗಳನ್ನು ಈ ಆದೇಶದ ದಿನಾಂಕದಿಂದ 45 ದಿನಗಳೊಳಗಾಗಿ ಪಾವತಿಸತಕ್ಕದ್ದು. ತಪ್ಪದಲ್ಲಿ ಆದೇಶ ದಿನಾಂಕದಿಂದ ರೂ.11,545/-ಗಳಿಗೆ ಶೇಕಡ 9%ರಂತೆ ವಾರ್ಷಿಕ ಬಡ್ಡಿಯ ಸಹಿತ ವಸೂಲಿ ಮಾಡಿಕೊಳ್ಳಲು ಆದೇಶಿಸಿದೆ.
4. ಈ ಆದೇಶದ ಪ್ರತಿಗಳನ್ನು ನಿಯಮಾನುಸಾರ ಉಭಯ ಪಕ್ಷಕಾರರಿಗೆ ಉಚಿತವಾಗಿ ನೀಡತಕ್ಕದ್ದು. 
5. ದೂರುದಾರರಿಗೆ ದೂರಿನ ಹೆಚ್ಚಿನ ಪ್ರತಿಗಳನ್ನು ಹಿಂದಿರುಗಿಸತಕ್ಕದ್ದು.
(ಶೀಘ್ರಲಿಪಿಗಾರರಿಗೆ ಉಕ್ತಲೇಖನ ನೀಡಿ, ಬೆರಳಚ್ಚು ಮಾಡಿಸಿ, ತಪ್ಪುಗಳನ್ನು ನೋಡಿ ಸರಿಪಡಿಸಿ ಅಂತಿಮ ಆದೇಶವನ್ನು 23ನೇ ನವೆಂಬರ್ 2022 ರಂದು ತೆರೆದ ನ್ಯಾಯಾಲಯದಲ್ಲಿ ಘೋಷಿಸಲಾಯಿತು)
 
(ರೇಣುಕಾದೇವಿ ದೇಶ್‍ಪಾಂಡೆ)ಮಹಿಳಾ ಸದಸ್ಯರು
(ಎಂ.ಶೋಭಾ)ಅಧ್ಯಕ್ಷರು
 
ಅನುಬಂಧ
ಪಿರ್ಯಾದುದಾರರ ಪರ ವಿಚಾರಣೆ ಮಾಡಿದ ಸಾಕ್ಷಿಗಳ ಪಟ್ಟಿ
ಕ್ರ.ಸಂ ವಿವರ
  1. 1.

Ex.P.1 – Copy of schedule of charges

  1. 2.

Ex.P.2 – Downloaded copy of Axis Bank message dated 04.01.2022

  1. 3.

Ex.P.3 – Copy of the repayment schedule

  1. 4.

Ex.P.4- Copy of Axis bank statement dated 01.01.2022 to 31.01.2022

  1. 5.

Ex.P.5 – Copy of personal loan no due certificate

  1. 6.

Ex.P.6 – Copy of Axis bank statement old loan account from 01.09.2021 to 15.09.2021

 
(ರೇಣುಕಾದೇವಿ ದೇಶ್‍ಪಾಂಡೆ)
ಮಹಿಳಾ ಸದಸ್ಯರು (ಎಂ.ಶೋಭಾ)
ಅಧ್ಯಕ್ಷರು
 
 
 
[HON'BLE MRS. M. SHOBHA]
PRESIDENT
 
 
[HON'BLE MS. Renukadevi Deshpande]
MEMBER
 

Consumer Court Lawyer

Best Law Firm for all your Consumer Court related cases.

Bhanu Pratap

Featured Recomended
Highly recommended!
5.0 (615)

Bhanu Pratap

Featured Recomended
Highly recommended!

Experties

Consumer Court | Cheque Bounce | Civil Cases | Criminal Cases | Matrimonial Disputes

Phone Number

7982270319

Dedicated team of best lawyers for all your legal queries. Our lawyers can help you for you Consumer Court related cases at very affordable fee.