ಎಲ್ಲರೊಳಗೊಂದಾಗು ಮಂಕುತಿಮ್ಮ
ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಂಗಳೂರು
ಉಪಸ್ಥಿತಿ: 1. ಶ್ರೀ ಕೆ.ಎಸ್.ಬೀಳಗಿ, ಅಧ್ಯಕ್ಷರು,
2. ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ, ಮಹಿಳಾ ಸದಸ್ಯರು,
3. ಶ್ರೀ ಹೆಚ್.ಜನಾರ್ಧನ್, ಸದಸ್ಯರು
ಆದೇಶ
ಸಿ.ಸಿ.ಸಂಖ್ಯೆ:18/2022
ಆದೇಶ ದಿನಾಂಕ 08ನೇ ಸೆಪ್ಟೆಂಬರ್ 2022
ಯೊಗೇಶ್ ಕುಮಾರ್ ಸಿ.ಇ.
ವಯಸ್ಸು 36,
ಬಿನ್. ಷ.ಈಶ್ವರಪ್ಪ,
ನಂ.114, 1ನೇ ಮುಖ್ಯ ರಸ್ತೆ, ಆರೋಗ್ಯ ಬಡಾವಣೆ, ನಾಗರಬಾವಿ,
ಬೆಂಗಳೂರು – 560 091.
-ಪಿರ್ಯಾದುದಾರರು
ವಿರುದ್ಧ
1. ಶಿಪ್ಟ್ ಫ್ರೈಟ್ ಸಲ್ಯೂಷನ್ಸ್,
ಡೈರೆಕ್ಟರ್, ಪ್ರಿಯಾ ನೆಲ್ನ್/ಜಯಂತ್ ಮೆಹ್ತ
ಕಸ್ಟಮರ್ ರೆಸ್ಪಾನ್ಸ್ ಟೀಂ,
ಹೆಡ್ ಆಫೀಸ್:
ಶಿಪ್ಟ್ ಫ್ರೈಟ್ ಸಲ್ಯೂಷನ್ಸ್ ಟೆಕ್ನಾಲಜಿ ಪ್ರೈ.ಲಿ.
ರಿಗೂಸ್ ಲೆವೆಲ್ 5, ಟವರ್ ಸಿ, ಗ್ರೀನ್ ಬೋಲೆವರ್ಡ್ ಬ್ಲಾಕ್-ಬಿ, ಸೆಕ್ಟರ್-62, ನ್ಯೋಯ್ಡ, ಉತ್ತರ ಪ್ರದೇಶ 201 301.
2. ಬೆಂಗಳೂರು ಕಛೇರಿ:
ಶಿಪ್ಟ್ ಫ್ರೈಟ್ ಸಲ್ಯೂಷನ್ಸ್ ಟೆಕ್ನಾಲಜಿ ಪ್ರೈ.ಲಿ.
ರಿಗೂಸ್ ಇಬಿಡಿ.ಎಲ್-9, ರಹೆಜಾ ಟವರ್ಸ್, ಈಸ್ಟ್ ವಿಂಗ್, ನಂ26/27, ಎಂ.ಜಿ.ರಸ್ತೆ, ಬೆಂಗಳೂರು 560 001.
… ಎದುರುದಾರರು
ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ
ಮಹಿಳಾ ಸದಸ್ಯರು,
1. ದೂರುದಾರರು ಎದುರುದಾರರ ವಿರುದ್ಧ ಗ್ರಾಹಕರ ಸಂರಕ್ಷಣಾ ಕಾಯ್ದೆ 2019 ರ ಕಲಂ 35 ರ ಅಡಿಯಲ್ಲಿ ದೂರನ್ನು ಸಲ್ಲಿಸಿದ್ದು, ದೂರುದಾರರು ಎದುರುದಾರರ ವಿರುದ್ಧ ಗ್ರಾಹಕ ಸಂರಕ್ಷಣಾ ಅಧಿನಿಯಮ 2019 ಕಲಂ 35ರಲ್ಲಿ ದೂರನ್ನು ಸಲ್ಲಿಸಿ ಈ ಕೆಳಗಿನಂತೆ ಆದೇಶಿಸಲು ಕೋರಿರುತ್ತಾರೆ;
ದೂರು ಸಲ್ಲಿಸಿದ ದಿನಾಂಕದಿಂದ ಎದುರುದಾರರು ತನ್ನ ಮೇಲ್‍ನಲ್ಲಿ ಕಳುಹಿಸಿದಂತೆ ವಾರ್ಷಿಕ 18%ರ ಬಡ್ಡಿಯಂತೆ ರೂ.17,475/- ನೀಡುವಂತೆ ಎದುರುದಾರರಿಗೆ ನಿರ್ದೆಶಿಬೇಕೆಂದು ಮತ್ತು ರೂ.5,00,000/- ಗಳನ್ನು 18%ರ ಬಡ್ಡಿಯಂತೆ ಎದುರುದಾರರಿಂದ ಉಂಟಾದ ಮಾನಸಿಕ ಹಿಂಸೆ, ಸಂಕಷ್ಟ ಮತ್ತು ಸಮಯದ ನಷ್ಟಕ್ಕಾಗಿ ರೂ.50,000/- ಮತ್ತು ಇತರೆ ಪರಿಹಾರಗಳನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶಿಸಿ ಆದೇಶವನ್ನು ನೀಡುವಂತೆ ಈ ಆಯೋಗಕ್ಕೆ ಕೋರಿರುತ್ತಾರೆ.
2. ದೂರುದಾರನ ದೂರಿನ ಅಂಶಗಳು ಈ ಕೆಳಗಿನಂತೆ ಇರುತ್ತವೆ:-
ದೂರುದಾರನು ತಮ್ಮ ಗೃಹಕೃತ್ಯದ ಸಾಮಾನುಗಳನ್ನು ಸ್ಥಳಾಂತರಿಸಲು ವೆಬ್‍ಸೈಟ್ ಮೂಲಕ ಎದುರುದಾರರನ್ನು ಸಂಪರ್ಕಿಸಿ ದಿನಾಂಕ 10.07.2021ರಂದು ಅರ್ಜಿ ಸಲ್ಲಿಸಿ ಪ್ರತಿಯಾಗಿ ಎದುರುದಾರರಾದ ಕೊಟೇಷನ್ ಮೂಲಕ ಎಲ್ಲಾ ವಿವರಗಳನ್ನು ಪಡೆದು, ಮುಂಗಡ ಹಣವನ್ನು ದಿನಾಂಕ 18.07.2021ರಂದು ದೂರುದಾರರು ರೂ.9,935/- ಗಳನ್ನು ಪಾವತಿಸಿದ್ದು, ದಿನಾಂಕ 19.07.2021ರಂದು ಗೃಹ ಸಾಮಾನುಗಳನ್ನು ಸ್ಥಳಾಂತರಿಸಿದ್ದು, ಸೋಫಾ ಸೆಟ್ ಒಂದನ್ನು ಬಿಟ್ಟ ಕಾರಣಕ್ಕೆ ಮನೆಯ ಮಾಲೀಕರು ಒಂದು ದಿನಕ್ಕೆ ರೂ.1,000/- ರಂತೆ ಮೂರು ದಿನಕ್ಕೆ ರೂ.3,000/- ಗಳ ಹಣ ಪಡೆದಿದ್ದು, ನಷ್ಟವಾಗಿದ್ದು, ಎದುರುದಾರರಿಂದ ಗೃಹ ಸಾಮಾನುಗಳಾದ ವಾಷಿಂಗ್ ಮಿಷನ್, ಪೈಪು ಹಾಳಾಗಿದ್ದು, ಮತ್ತು ಮರದ ಕಟ್ಟಿಗೆಯ ಮಂಚ(ಕಟ್ಟಿಗೆಯ) ಹಾಳಾಗಿದ್ದು, 3000 ಹೊಸದು ಖರೀದಿಸಲು ಖರ್ಚಾಗಿದ್ದು, ಅಲ್ಲದೆ ಮೊದಲ ಕೊಟೇಶನಲ್ಲಾಗಿ ರೂ.4,935/- ತೋರಿಸಿದ್ದು, ತದನಂತರ ದಿನಾಂಕ 18.07.2021ರಂದು ರೂ.9,935/- ಎಂದು ವಿವರಗಳನ್ನು ಕೊಟ್ಟದ್ದು, ಇದರಿಂದ ಎದುರುದಾರರು ದೂರುದಾರನಿಗೆ ಸೇವಾ ನ್ಯೂನತೆಯನ್ನು ತೋರಿದ್ದು, ಎಂದು ದಿನಾಂಕ 11.10.2021ರಂದು ಕಾನೂನು ನೋಟೀಸ್ ನೀಡಿ ಯಾವುದೇ ಜವಾಬನ್ನು ಕೊಡದೆ ಇದ್ದಾಗ ಕೊನೆಯ ಹಂತವಾಗಿ ಎದುರುದಾರರಿಗೆ ಸೇವಾ ನ್ಯೂನತೆ ವಂಚನೆಯ ವಿರುದ್ದ ಈ ಆಯೋಗಕ್ಕೆ ದೂರು ದಾಖಲಿಸಿ ಪರಿಹಾರವನ್ನು ನೀಡುವಂತೆ ಕೋರಿರುತ್ತಾರೆ.
3. ಎದುರುದಾರನಿಗೆ ನೋಟೀಸ್ ಜಾರಿಯಾದರೂ, ಎದುರುದಾರರು ಆಯೋಗದ ಮುಂದೆ ಹಾಜರಾಗಲಿಲ್ಲ. ಅದರಿಂದ ಅವರನ್ನು ಏಕಪಕ್ಷೀಯವಾಗಿ ಎಂದು ಇಡಲಾಯಿತು.
4. ದೂರುದಾರರು ಆಯೋಗಕ್ಕೆ ಹಾಜರಾಗಿ ಪ್ರಮಾಣ ಪತ್ರದ ಮೂಲಕ ಸಾಕ್ಷ್ಯವನ್ನು ಸಲ್ಲಿಸಿ ನಿಶಾನೆ ಪಿ.1 ರಿಂದ ಪಿ5 ಎಂದು ಗುರುತಿಸಲಾಗಿದೆ. ಅವರು ಸಲ್ಲಿಸಿರುವ ಸಾಕ್ಷ್ಯಾದಾರಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ.
5. ಈ ಕೆಳಕಂಡ ಅಂಶಗಳು ನಮ್ಮ ತೀರ್ಮಾನಕ್ಕಾಗಿ ಮೂಡಿ ಬಂದಿವೆ.
(1) ದೂರುದಾರನು ಎದುರುದಾರರ ಕರ್ತವ್ಯ ಲೋಪ, ಅನುಚಿತ ವ್ಯಾಪಾರ ಪದ್ಧತಿಯನ್ನು ಅನುಸರಿಸಿ ಮತ್ತು ಸೇವಾ ನ್ಯೂನ್ಯತೆ ಎಸಗಿದ್ದಾರೆ ಎನ್ನುವ ಸಂಗತಿಯನ್ನು ಸಾಬೀತು ಪಡಿಸಿದ್ದಾರೆಯೇ? ಹಾಗಿದ್ದಲ್ಲಿ ಆತ ಕೇಳಿಕೊಂಡ ಪರಿಹಾರಕ್ಕೆ ಅರ್ಹರೇ?
(2) ಆದೇಶ ಏನು?
6. ಮೇಲ್ಕಂಡ ಅಂಶಗಳನ್ನು ಈ ಕೆಳಕಂಡ ಕಾರಣಕ್ಕಾಗಿ ಈ ರೀತಿ ನಿರ್ಣಯಿಸಿದ್ದೇವೆ.
• 1ನೇ ಅಂಶ - ಭಾಗಶ: ಸಕಾರಾತ್ಮಕವಾಗಿ
• 2ನೇ ಅಂಶ - ಅಂತಿಮ ತೀರ್ಪಿನ ಪ್ರಕಾರ
ಕಾರಣಗಳು
7. 1 ನೇ ಅಂಶದ ಮೇಲೆ:- ದೂರುದಾರನು ತನ್ನ ದೂರಿನಲ್ಲಿ ಕೊಟ್ಟ ಸಂಗತಿಗಳನ್ನು ನಾವು ಈಗಾಗಲೇ ಸಂಕ್ಷೀಪ್ತವಾಗಿ ಪ್ಯಾರಾ 2 ರಲ್ಲಿ ವಿವರಿಸಿದ್ದೇವೆ. ಪ್ರಸ್ತುತ ಪ್ರಕರಣದಲ್ಲಿ ಎದುರುದಾರರು ಈ ಆಯೋಗದಿಂದ ಕಳಿಸಿದ ನೋಟೀಸ್ ಜಾರಿಯಾಗಿದ್ದರೂ ಕೂಡ ಈ ಆಯೋಗದ ಮುಂದೆ ಹಾಜರಾಗದೆ ಗೈರು ಹಾಜರಾಗಿರುತ್ತಾರೆ. ಈ ಕಾರಣಕ್ಕಾಗಿ ಅವರನ್ನು ಏಕಪಕ್ಷೀಯ ಎಂದು ನಿರ್ಣಯಿಸಿ ದೂರುದಾರರು ತನ್ನ ಅಹವಾಲನ್ನು ಸಾಬೀತುಪಡಿಸುವ ಕುರಿತು ಪ್ರಮಾಣ ಪತ್ರವನ್ನು ಸಲ್ಲಿಸಿರುತ್ತಾರೆ. ಪ್ರಮಾಣ ಪತ್ರವನ್ನು ಕುಲಂಕುಷವಾಗಿ ಪರಿಶೀಲನೆ ಮಾಡಿದ್ದು, ಅವುಗಳನ್ನು ಪುನ: ವಿಮರ್ಶಿಉವ ಪ್ರಮೇಯ ಉದ್ಬವವಾಗುವುದಿಲ್ಲ. ದೂರುದಾರನು ತಿಳಿಸಿರುವ ಅಂಶಗಳನ್ನು ಎದುರುದಾರರು ಈ ಆಯೋಗದ ಮುಂದೆ ಹಾಜರಾಗಿ ಅಲ್ಲಗಳೆಯದೆ ಇರುವುದರಿಂದ ಆತ ದೂರಿನಲ್ಲಿ ಹಾಕಿದ ಸಂಗತಿಗಳು ನಿಜವೆಂದು ಅಭಿಪ್ರಾಯಕ್ಕೆ ಬರಬಹುದು ಎಂದು ಮಾನ್ಯ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 2018(1) ಸಿಪಿಆರ್ 314(ಎನ್‍ಸಿ) Iಟಿ ಣhe ಛಿಚಿse oಜಿ ಒ/s Siಟಿgಟes ಃuiಟಜeಡಿs ಚಿಟಿಜ Pಡಿomoಣeಡಿs ಐಣಜ., ಃಚಿಟಿgಚಿಟoಡಿe –vs- ಂmಚಿಟಿ ಏumಚಿಡಿ ಉಚಿಡಿg, ಪ್ರಕರಣದಲ್ಲಿ ಉಲ್ಲೇಖಿಸಿರುತ್ತಾರೆ.
8. ದೂರುದಾರನು ನಿಶಾನೆ ಪಿ2 ಮತ್ತು ನಿಶಾನೆ ಪಿ3 ಇನ್ವೆಸ್ಟ್ ಪಡೆದುಕೊಂಡು ನಿಶಾನೆ ಪ5ರಂತೆ ಒಟ್ಟು ರೂ.9,934/- ಹಣ ಪಾವತಿ ಮಾಡಿರುವುದು ಸಿದ್ದಗೊಂಡಿರುತ್ತದೆ. ವಾಷಿಂಗ್ ಮಿಷನ್ ಕುರಿತು ರೂ.1,500/- ಹಾಗೂ ಕಟ್ಟಿಗೆಯ ಹೊಸ ಮಂಚ ಖರೀದಿಸಲು ರೂ.3,000/- ಬೇಕೆಂದು ಹೇಳಿಕೊಂಡಿದ್ದಾರೆ. ಈ ಕುರಿತು ದೂರುದಾರನು ದಾಖಲೆಗಳನ್ನು ಹಾಜರಿಪಡಿಸಿದೆ. ಇದ್ದ ಕಾರಣ, ಎದುರುದಾರನು ಈ ಹೇಳಿಕೆಯನ್ನು ಅಲ್ಲಗಳೆಯದೆ ಅಂಶಗಳು ಕಂಡುಬಂದಿಲ್ಲ. ಆದಕಾರಣ ಎದುರುದಾರನು ರೂ.4,500/- ಗಳನ್ನು ದೂರುದಾರನಿಗೆ ಪಾವತಿಸಬೇಕಾಗುತ್ತದೆ.
9. ದೂರುದಾರನು ನಿಶಾನೆ ಪಿ4ರಂತೆ ಪತ್ರ ವ್ಯವಹಾರ ಮಾಡಿದರೂ ಕೂಡ ಎದುರುದಾರನು ಈ ಹಣವನ್ನು ಪಾವತಿಸಿಲ್ಲ. ಎದುರುದಾರನ ಈ ಕಾರ್ಯವು ದೂರುದಾರನಿಗೆ ರೂ.1,500/- ಪರಿಹಾರ ಧನ ಹಾಗೂ ಪ್ರಕರಣದ ಶುಲ್ಕ ರೂ.1,000/- ಕೂಡ ಕೊಡಬೇಕಾಗುತ್ತದೆ ಎಂದು ತೀರ್ಮಾನಿಸಿದ್ದು, ಸಮಂಜಸವಾಗಿದೆ ಎಂದು ಭಾವಿಸಿ ಈ ದೂರಿಗೆ ಎದುರುದಾರರು ಯಾವುದೇ ಪುರಾವೆ ಮತ್ತು ಸಾಕ್ಷ್ಯವನ್ನು ವ್ಯಕ್ತಪಡಿಸದೇ ಇರುವುದರಿಂದ, ದೂರುದಾರರು ಹೇಳಿದ ಸಂಗತಿಗಳು ಸತ್ಯವೆಂದು ಅಭಿಪ್ರಾಯಕ್ಕೆ ಬಂದಿದ್ದು, ಎದುರುದಾರರಾದ 1 ಮತ್ತು 2 ರಿಂದ ರಿಪೇರಿ ಮತ್ತಿತರೆ ಖರ್ಚು ಒಟ್ಟು ರೂ.4,500/- ಗಳನ್ನು ಕೊಡುವಂತೆ ನಿರ್ದೇಶಿಸಿ, ಪರಿಹಾರ ರೂಪವಾಗಿ ರೂ.1,500/- ಗಳನ್ನು ಮತ್ತು ವ್ಯಾಜ್ಯಗಳ ಖರ್ಚು ರೂ.1,000/- ಗಳನ್ನು ಕೊಡಲು ನಿರ್ಣಯಿಸಿದ್ದು, ಈ ಕಾರಣಕ್ಕಾಗಿ 1ನೇ ಅಂಶವನ್ನು ಭಾಗಶ: ಸಕಾರಾತ್ಮಕ ಎಂದು ತೀರ್ಮಾನಿಲಾಗಿದೆ.
10. 2ನೇ ಅಂಶದ ಮೇಲೆ:- 1ನೇ ಅಂಶದಲ್ಲಿ ಕೊಟ್ಟಿರುವ ನಿರ್ಣಯಕ್ಕೆ ಅನುಗುಣವಾಗಿ ಈ ಕೆಳಕಂಡ ಆದೇಶವನ್ನು ಮಾಡಿದ್ದೇವೆ.
ಆದೇಶ
1. ಗ್ರಾಹಕ ಸಂರಕ್ಷಣಾ ಕಾಯಿದೆ 2019ರ ಕಲಂ 35 ರ ಅನ್ವಯ ದೂರನ್ನು ಭಾಗಶ: ಪುರಸ್ಕರಿಸಲಾಗಿದೆ.
2. ಎದುರುದಾರರು 1 ಮತ್ತು 2 ಇವರು ದೂರುದಾರರಿಗೆ ರೂ.4,500/- ಗಳನ್ನು (ರಿಪೇರಿ ಮತ್ತು ಇತರೆ ಖರ್ಚು) ಕೊಡುವಂತೆ ನಿರ್ದೇಶಿಸಲಾಗಿ ಮತ್ತು ಪರಿಹಾರ ರೂಪದಲ್ಲಿ ರೂ.1,500/- ಗಳನ್ನು ಮತ್ತು ರೂ.1,000/- ಗಳ ವ್ಯಾಜ್ಯಗಳ ಖರ್ಚುಗಳನ್ನು ಈ ಆದೇಶದ ದಿನಾಂಕದಿಂದ 60 ದಿನದೊಳಗಾಗಿ ಪಾವತಿಸತಕ್ಕದ್ದು. ತಪ್ಪಿದಲ್ಲಿ ಆದೇಶ ದಿನಾಂಕದಿಂದ ಶೇಕಡ 6%ರಂತೆ ವಾರ್ಷಿಕ ಬಡ್ಡಿಯ ಸಹಿತ ವಸೂಲಿ ಮಾಡಿಕೊಳ್ಳಲು ಆದೇಶಿಸಿದೆ.
3. ಈ ಆದೇಶದ ಪ್ರತಿಗಳನ್ನು ನಿಯಮಾನುಸಾರ ಉಭಯಪಕ್ಷಕಾರರಿಗೆ ಉಚಿತವಾಗಿ ನೀಡತಕ್ಕದ್ದು.
(ಶೀಘ್ರಲಿಪಿಗಾರರಿಗೆ ಉಕ್ತಲೇಖನ ನೀಡಿ, ಬೆರಳಚ್ಚು ಮಾಡಿಸಿ, ತಪ್ಪುಗಳನ್ನು ನೋಡಿ ಸರಿಪಡಿಸಿ ಅಂತಿಮ ಆದೇಶವನ್ನು 8ನೇ ಸೆಪ್ಟೆಂಬರ್ 2022 ರಂದು ತೆರೆದ ನ್ಯಾಯಾಲಯದಲ್ಲಿ ಘೋಷಿಸಲಾಯಿತು)
(ರೇಣುಕಾದೇವಿ ದೇಶ್‍ಪಾಂಡೆ)
ಮಹಿಳಾ ಸದಸ್ಯರು (ಹೆಚ್.ಜನಾರ್ಧನ್)
ಸದಸ್ಯರು (ಕೆ.ಎಸ್.ಬೀಳಗಿ)
ಅಧ್ಯಕ್ಷರು
ಅನುಬಂಧ
ಪಿರ್ಯಾದುದಾರರ ಪರ ವಿಚಾರಣೆ ಮಾಡಿದ ಸಾಕ್ಷಿಗಳ ಪಟ್ಟಿ
ಕ್ರ.ಸಂ ವಿವರ
1. 1. ಇx.P.1 – ಅeಡಿಣiಜಿiಛಿಚಿಣe uಟಿಜeಡಿ Seಛಿಣioಟಿ 65(ಃ) oಜಿ ಇviಜeಟಿಛಿe ಂಛಿಣ.
2. 2. ಇx.P.2 – ಅoಠಿಥಿ oಜಿ ಣhe quoಣಚಿಣioಟಿ issueಜ bಥಿ ಔP
3. 3. ಇx.P.3- ಈiಟಿಚಿಟ iಟಿvoiಛಿe issueಜ bಥಿ ಔP
4. 4. ಇx.P.4- ಃuಟಿಛಿh oಜಿ emಚಿiಟ ಛಿoಡಿಡಿesಠಿoಟಿಜeಟಿಛಿe beಣತಿeeಟಿ me ಚಿಟಿಜ ಔP ಜಿಡಿom ಎuಟಥಿ-2021ಣo 20.09.2021
5. 5. ಇx.P.5- ಅoಠಿಥಿ oಜಿ ಠಿಚಿಥಿmeಟಿಣ ಜeಣಚಿiಟs ಣo ಔP
(ರೇಣುಕಾದೇವಿ ದೇಶ್‍ಪಾಂಡೆ)
ಮಹಿಳಾ ಸದಸ್ಯರು (ಹೆಚ್.ಜನಾರ್ಧನ್)
ಸದಸ್ಯರು
(ಕೆ.ಎಸ್.ಬೀಳಗಿ)
ಅಧ್ಯಕ್ಷರು