ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮಡಿಕೇರಿ
ದಿನಾಂಕ: 26.11.2021
ಗ್ರಾಹಕರ ದೂರು ಸಂಖ್ಯೆ:32/2020
ನೊಂದಣಾ ದಿನಾಂಕ :18.09.2020
ಉಪಸ್ಥಿತರು
ಶ್ರಿ. ಪ್ರಕಾಶ. ಕೆ : ಮಾನ್ಯ ಅಧ್ಯಕ್ಷರು
ಶ್ರಿ. ಬಿ. ನಿಮ೯ಲ್ ಕುಮಾರ್ : ಮಾನ್ಯ ಸದಸ್ಯರು
ಶ್ರಿ. ಸಿ. ರೇಣುಕಾಂಭ : ಮಾನ್ಯ ಸದಸ್ಯರು
ವಿಜಯ ರೈ, 54 ವಷ೯
ತಂದೆ : ಪೌತಿ ಸಂಜೀವ ರೈ ಎನ್ .ಆರ್
ಸುಬ್ರಮಣಿ ನಿಲಯ ಸಂಪಿಗೆಕಟ್ಟೆ ರಸ್ತೆ
ಮಡಿಕೇರಿ.
(ವೈಯಕ್ತಿಕವಾಗಿ ಪಕ್ಷ) ………….. ದೂರುದಾರ
ವಿರುದ್ದ
- ಮಂಜು ಸ್ಟೋರ್ ಮ್ಯಾನೇಜರ್
ರಿಲಾಯನ್ಸ್ ರಿಟೇಲ್ ಲಿ.
ಸವೆ೯ ನಂ 106/1 ಚೌಕ್ ಹತ್ತಿರ,
ಯೂನಿಯನ್ ಬ್ಯಾಂಕ್ ಎದುರು
ಮಡಿಕೇರಿ.
- ಮ್ಯಾನೇಜರ್
RELAINCE RETEL LTD.
SHED NO.1118/120
INDIA CORPON
MANKOLINAKA DAPODE
BHIVANDI THANE
- ಮ್ಯಾನೇಜರ್
RELAINCE RETAIL LTD
REG OFFICE-3RD FLOOR
COURT HOUSE
L.T MARG, DHOBI
TAKAO MUMBAI-40002
( ಪ್ರತಿನಿಧಿಸುವ ವಕೀಲರು : 1 TO 3 M.P.T) …………….ಎದುರುದಾರ
ಶ್ರಿ. ಪ್ರಕಾಶ. ಕೆ. ಮಾನ್ಯ ಅಧ್ಯಕ್ಷರ ಆದೇಶ:
ದೂರುದಾರರು ಈ ದೂರನ್ನು ಗ್ರಾಹಕರ ಸಂರಕ್ಷಣಾ ಕಾಯ್ದೆ 2019 ರ ಕಲಂ 35 ರ ಅಡಿಯಲ್ಲಿ ಸಲ್ಲಿಸಿದ್ದು ಆ ಬಗ್ಗೆ ರೂ.9000/- ಟಿ.ವಿ ಮೊತ್ತವನ್ನು ರೂ.15,000/- ಮಾನಸಿಕ ತೊಂದರೆ ವೆಚ್ಚ ಹಾಗೂ ರೂ.10,000/- ವ್ಯಾಜ್ಯಗಳ ಖಚು೯ ವೆಚ್ಚಗಳನ್ನು ಕೋರಿರುತ್ತಾರೆ.
ಪ್ರಕರಣದ ಸಾರಾಂಶ ಈ ಕೆಳಕಂಡಂತೆ ಇದೆ:
ದೂರುದಾರನಾದ ಆತನು ಮತ್ತು ಆತನ ಗೆಳೆಯನಾದ ಜಗದೀಶ ಮಡಿಕೇರಿ ರಿಲಾಯನ್ಸ್ ರಿಟೇಲ್ .ಲಿ ಸವೆ೯ ನಂ.106 ಇವರಿಂದ ದಿ:13/11/2019 ರಂದು ರಿಲಾಯನ್ಸ್ ಕಂಪನಿಯ ರಿ - ಕನೆಕ್ಟ್ 32 ಇಂಚಿನ ಟಿ.ವಿ ಮತ್ತು 40 ಇಂಚಿನ 2 ಟ.ವಿ ಯನ್ನು ಮೊಬಲಗು ರೂ.22,900/-ಕ್ಕೆ ಖರೀದಿಸಿದ್ದು ಇದರಲ್ಲಿ ದೂರುದಾರನು ಒಂದು ಟಿ.ವಿ ಯನ್ನು ಖರೀದಿಸಿದ್ದು, ಇದರ ಮೊತ್ತ ರೂ.9,000/- ಆಗಿರುತ್ತದೆ. ಐ.ಡಿ ನಂ.60421073 TAX INVOICE 369510519503639 ಆಗಿದ್ದು ಹಣವನ್ನು ಜಗದೀಶರವರ ಖಾತೆಯಿಂದಲೇ ದೂರುದಾರನು ಪಾವತಿಸಿದ ಬಗ್ಗೆ ತಿಳಿಸಿರುತ್ತಾರೆ.
ತನ್ನ ದೂರಿನಲ್ಲಿ ಆತನು ಪಡೆದುಕೊಂಡ 32 ಇಂಚಿನ ರಿ-ಕನೆಕ್ಡ್ ಟಿ.ವಿ 3 ತಿಂಗಳಲ್ಲಿ ದುರಸ್ತಿಯಾಗಿದ್ದು ಆ ಬಗ್ಗೆ ಕಂಪನಿಗೆ ಮಾಚ್‌೯ 17 ನೇ ತಾರೀಖಿನ ರಿಸ್ಟರ್ಡ ಅಂಚೆ ಮೂಲಕ ಎದುರುದಾರದ 1ನೇ ಪಾಟಿ೯ಯವರಿಗೆ ತಿಳಿಸಿದ್ದು ಆದರೆ ಸದರಿಯವರಿಂದ ಆತನಿಗೆ ಯಾವುದೇ ಸಹಕಾರ/ಸ್ಪಂದನೆ ದೊರೆತಿರುವುದಿಲ್ಲ ಎಂದು ತಿಳಿಸಿರುತ್ತಾರೆ.
ಎದುರುದಾರರಿಗೆ ಆ ಬಗ್ಗೆ ಈ ಆಯೋಗದಿಂದ ನೋಟಿಸನ್ನು ಜಾರಿ ಮಾಡಲಾಯಿತು. ನೋಟಿಸನ್ನು ಜಾರಿಮಾಡಿದ ನಂತರ ತಮ್ಮ ವಕೀಲರ ಮೂಲಕ ಹಾಜರಾಗಿ ಈ ಕೆಳಕಂಡಂತೆ ಲಿಖಿತ ಹೇಳಿಕೆಗಳನ್ನು ಸಲ್ಲಿಸಿರುತ್ತಾರೆ..
ಎದುರುದಾರರ ಕಂಪನಿಯು ಹೆಸರುವಾಸಿಯಾದ ಕಂಪನಿಯಾಗಿದ್ದು ಮತ್ತು ಅವರು ಉತ್ಪಾದಿಸುವ ಸಾಮಾಗ್ರಿಯು ಒಳ್ಳೆಯ ಗುಣಮಟ್ಟದ್ಧಾಗಿದ್ದು ಮತ್ತು ಹಲವಾರು ವಷ೯ಗಳಿಂದ ಒಳ್ಳೆಯ ಹೆಸರು ಮತ್ತು ವಿಶ್ವಾಸವನ್ನು ಜನರಿಂದ ಪಡೆದುಕೊಂಡಿದ್ದಾರೆ ಎಂದು ತಿಳಿಸಿರುತ್ತಾರೆ.
ದೂರುದಾರನು ಹಾಕಿರುವ ದೂರು ಕಾನೂನಿನ ಚೌಕಟ್ಟಿನ ಅಡಿಯಲ್ಲಿ ನಿಲ್ಲತಕ್ಕದ್ದಲ್ಲವೆಂತಲೂ ಮತ್ತು ಪ್ರಥಮವಾಗಿಯೆ ಈ ದೂರನ್ನು ವಜಾ ಮಾಡಬೇಕೆಂದು ತಿಳಿಸಿರುತ್ತಾರೆ. ಮಾತ್ರವಲ್ಲದೆ ಇಂತಹ ಪ್ರಕರಣವನ್ನು ದೂರುದಾರನು ಹಾಕಲು ಬರುವುದಿಲ್ಲವೆಂತಲೂ ತಿಳಿಸಿರುತ್ತಾರೆ.
ಈ ಪ್ರಕರಣದಲ್ಲಿ ದೂರುದಾರ ಎದುರುದಾರರ ಗ್ರಾಹಕನಾಗಿರುವುದಿಲ್ಲವೆಂತಲೂ ಮತ್ತು ಎದುರುದಾರನು ಆತನಿಗೆ ಮಾರಾಟ ಮಾಡದ ಕಾರಣ ಅವರ ಮದ್ಯೆ ಯಾವುದೇ ಸಂಬಂದ ಇರುವುದಿಲ್ಲವೆಂತಲೂ ಅದ್ದರಿಂದ ಈ ಆಯೋಗವು ಈ ಪ್ರಕರಣವನ್ನು ತನ್ನ ವ್ಯಾಪ್ತಿಯಡಿಯಲ್ಲಿ ವಿಚಾರಣೆ ಮಾಡಲು ಬರುವುದಿಲ್ಲವೆಂತಲೂ ತಿಳಿಸಿರುತ್ತಾರೆ. ಎದುರುದಾರನು ಮುಂದುವರಿದು ತಮ್ಮ ಲಿಖಿತ ಹೇಳಿಕೆಯಲ್ಲಿ ದೂರನ್ನು ಗಮನಿಸಿದಾಗ ಅದರಲ್ಲಿರುವ ಒಪ್ಪುವ ಸಂಗತಿಯೆನೆಂದರೆ ದೂರುದಾರನು ಟಿ.ವಿ ಯನ್ನು ಖರೀದಿ ಮಾಡಿರುವ ವ್ಯಕ್ತಿ ಆಗಿರುವುದಿಲ್ಲವೆಂತಲೂ ಆದರೆ ಆತನ ಸ್ನೇಹಿತನಾದ ಒಬ್ಬ ಜಗದೀಶ ಎಂಬವನು ಟಿ.ವಿ.ಯನ್ನು ಖರೀದಿ ಮಾಡಿದ್ದು ಮತ್ತು ಅದಕ್ಕೆ ಸಂಬಂದಪಟ್ಟ ಹಣವನ್ನು ಆತನೇ ಪಾವತಿಸಿದ್ದಾನೆಂದು ತಿಳಿಸಿರುತ್ತಾರೆ.
ಎದುರುದಾರರು ಮುಂದುವರಿದು ತಮ್ಮ ಲಿಖಿತ ಹೇಳಿಕೆಯಲ್ಲಿ ಅವರ ಕಡೆಯಿಂದ 40 ಇಂಚಿನ ಟಿ.ವಿಯನ್ನು ಯಾರಾದರೂ ಖರೀದಿ ಮಾಡಿದರೆ ಅಂತಹ ವ್ಯಕ್ತಿಗೆ 32 ಇಂಚಿನ ಟಿ.ವಿ ಯನ್ನು ಪುಕ್ಕಟೆ ಬಹುಮಾನವಾಗಿ ಕೊಡುವ ಆಫರ್ ನ್ನು ಅವರು ಆ ಬಗ್ಗೆ ಪ್ರಕಟಿಸಿದ್ದಾರೆಂತಲೂ, ಆ ಬಗ್ಗೆ ಟ.ವಿಯನ್ನು ಖರೀದಿ ಮಾಡಿದ ನಂತರ ಖರೀದಿದಾರನು ಸೂಚಿಸಿದ ಪ್ರಕಾರ ಮತ್ತು ಅವರ ಕಂಪನಿಯವರು ನೀಡಿರುವ ಮ್ಯಾನ್ವಲ್ ಪ್ರಕಾರ ಖರೀದಿದಾರನು 32 ಇಂಚಿನ ಟಿ.ವಿಯನ್ನು ಸಮಪ೯ಕವಾಗಿ ಉಪಯೋಗಿಸದ ಕಾರಣ ಆ ಟಿ.ವಿ.ಯು ರಿಪೇರಿಗೆ ಬಂದಿದೆ ಎಂತಲೂ ಆದ್ದರಿಂದ ಆ ಟಿ.ವಿಯು ಯಾವುದೇ ರೀತಿಯ ಉತ್ಪಾದನಾ ನ್ಯೂನ್ಯತೆ ಇರುವುದಿಲ್ಲವೆಂತಲು ತಿಳಿಸಿರುತ್ತಾರೆ.
ಎದುರುದಾರರು ಮುಂದುವರಿದು ತನ್ನ ಲಿಖಿತ ಹೇಳಿಕೆಯಲ್ಲಿ ಆ ರೀತಿ ಸಮಪ೯ಕವಾಗಿ ಆ 32 ಇಂಚಿನ ಟಿ.ವಿಯನ್ನು ಉಪಯೋಗಿಸುತ್ತಿದ್ದರೂ ಸಹ ಎದರುದಾರರ ಪ್ರತಿನಿಧಿಯು ಆ ಟಿ.ವಿ.ಯನ್ನು ರಿಪೇರಿ ಮಾಡಿ ಬಂದಿರುತ್ತಾರೆ ಎಂತಲೂ ಮತ್ತು ಆ ಟಿ.ವಿಯನ್ನು ಮುಂದೆ ಸಮಪ೯ಕ ರೀತಿಯಲ್ಲಿ ಬಳಸಬೇಕೆಂದು ತಿಳಿಸಿದ್ದು, ಆ ರೀತಿ ಅವರ ಕಂಪನಿಯ ಪ್ರತಿನಿಧಿ ಸೂಚಿಸಿದರೂ ಸಹ ಆ 32 ಇಂಚಿನ ಟಿ.ವಿ.ಯನ್ನು ಸರಿಯಾದ ರೀತಿಯಲ್ಲಿ ಪುನಃ ಉಪಯೋಗಿಸದ ಕಾರಣ ರಿಪೇರಿಗೆ ಬಂದಿರುತ್ತದೆ. ಆದ್ದರಿಂದ ಆ ಟಿ.ವಿಯ ಉತ್ಪಾದನೆಯಲ್ಲಿ ಯಾವುದೇ ನ್ಯೂನ್ಯತೆ ಇರುವುದಿಲ್ಲ ಆದರೆ ಆ ಟಿ.ವಿ ಯನ್ನು ಸಮಪ೯ಕವಾಗಿ ಬಳಸದ ಕಾರಣ ಟಿ.ವಿ. ರಿಪೇರಿಗೆ ಬಂದಿರುತ್ತದೆ. ಈ ಎಲ್ಲಾ ಕಾರಣಗಳಿಂದ ದೂರುದಾರರು ಹಾಕಿರುವ ದೂರನ್ನು ಭಾರಿ ಮೊತ್ತದ ಖಚು೯ ಸಮೇತ ದೂರನ್ನು ವಜಾ ಮಾಡಬೇಕೆಂದು ಎದುರುದಾರರು ಕೋರಿರುತ್ತಾರೆ.
ಈ ಪ್ರಕರಣದಲ್ಲಿ ದೂರುದಾರರು ತನ್ನ ಮುಖ್ಯ ವಿಚಾರಣೆಯ ಪ್ರಮಾಣ ಪತ್ರವನ್ನು ಸಲ್ಲಿಸಿದ್ದು ಅವರನ್ನು cw-1 ಎಂದು ಪರಿಗಣಿಸಲಾಯಿತು. ದೂರುದಾರರನು 3 ದಾಖಲೆಗಳನ್ನು ಹಾಜರುಪಡಿಸಿದ್ದು ಅವುಗಳನ್ನು ನಿಶಾನೆ ಸಿ-1 ರಿಂದ ನಿಶಾನೆ ಸಿ-3 ಎಂದು ಗುರುತಿಸಲಾಯಿತು. ಎದುರುದಾರರ ಪರವಾಗಿ 1ನೇ ಎದುರುದಾರ ಮ್ಯಾನೇಜರ್ ಆದ ಮಂಜು ಗೌಡ ಜೆ.ಮ್ ಮುಖ್ಯ ವಿಚಾರಣೆಯ ಪ್ರಮಾಣಪತ್ರ ವನ್ನು ಸಲ್ಲಿಸಿದ್ದು ಅವರನ್ನು Rw-1 ಎಂದು ಪರಿಗಣಿಸಲಾಯಿತು.
ಆದರೆ ಎದುರುದಾರರ ಪರವಾಗಿ ಯಾವುದೇ ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲಾ.
ಎರಡೂ ಕಡೆಯ ವಾದ ಮತ್ತು ಪ್ರತಿವಾದವನ್ನು ಆಲಿಸಿದೆವು. ಎದುರುದಾರರ ವಕೀಲರು ಲಿಖಿತವಾದ ಪತ್ರವನ್ನು ಸಲ್ಲಿಸಿರುತಾರೆ.
ಈಗ ಉದ್ಬವಿಸುವ ಅಂಶಗಳೆನೆಂದರೆ:
- ಇಂತಹ ಪ್ರಕರಣವನ್ನು ವಿಚಾರಿಸಲು ಈ ಆಯೋಗದ ವ್ಯಾಪ್ತಿಗೆ ಬರುವುದಿಲ್ಲವೇ?
- ಎದುರುದಾರರು ತನ್ನ ಸೇವೆಯಲ್ಲಿ ನ್ಯೂನ್ಯತೆಯನ್ನು ಮಾಡಿದ್ದಾರೆ ಎಂಬುದನ್ನು ದುರುದಾರರು ಸಾಬೀತುಪಡಿಸುತ್ತಾರೆಯೇ ?
- ದೂರುದಾರನು ಈ ದೂರಿನಲ್ಲಿ ಕೇಳಿದ ಪರಿಹಾರವನ್ನು ಪಡೆಯಲು ಬಾದ್ಯಸ್ತನೇ?
- ಏನು ಆದೇಶ?
ಈ ಮೇಲಿನ ಅಂಶಗಳಿಗೆ ಈ ಕೆಳಕಂಡಂತೆಉತ್ತರಿಸುತ್ತೆನೆ.
- ಸಕಾರಾತ್ಮಕವಾಗಿ / ಬರುವುದಿಲ್ಲ
- ಈ ಅಂಶವನ್ನು ವಿಚಾರಿಸುವ ಅವಶ್ಯಕತೆ ಬರುವುದಿಲ್ಲ
- ನಕಾರಾತ್ಮಕವಾಗಿ
- ಕೊನೆಯ ಆದೇಶದಂತೆ ಈ ಕೆಳಕಂಡ ಕಾರಣಗಳಿಗಾಗಿ.
ಕಾರಣಗಳು
ಆಂಶ-1:
ದೂರುದಾರರು ತನ್ನ ಲಿಖಿತ ಹೇಳಿಕೆಯಲ್ಲಿ ದೂರುದಾರರು ಹಾಕಿರುವ ದೂರು ಕಾನೂನಿನಡಿಯಲ್ಲಿ ನಿಲ್ಲತಕ್ಕದ್ದಲ್ಲ ಎಂದು ತಿಳಿಸಿರುತ್ತಾರೆ.
ಮತ್ತು ಇಂತಹ ಕೇಸನ್ನು ದೂರುದಾರರು ಈ ಆಯೋಗದ ಮುಂದೆ ಸಲ್ಲಿಸಲು ಬರುವುದಿಲ್ಲಾವೆಂತಲೂ ತಿಳಿಸಿರುತ್ತಾರೆ. ಯಾಕೆಂದರೆ ಈ ಪ್ರಕರಣದಲ್ಲಿ ದೂರುದಾರ ಎದುರುದಾರನ ಗ್ರಾಹಕನಾಗಿರುವುದಿಲ್ಲಾ ಮತ್ತು ಸಂಬಂಧಪಟ್ಟ ಟಿ.ವಿ.ಯನ್ನು ಎದುರುದಾರರು ಆತನಿಗೆ ಮಾರಟ ಮಾಡಿರುವುದಿಲ್ಲಾ ಆದ್ದರಿಂದ ಈ ಪ್ರಕರಣ ಈ ಆಯೋಗದ ವ್ಯಾಪ್ತಿಯಲ್ಲಿ ಬರುವುದಿಲ್ಲಾ ಎಂದು ತಿಳಿಸಿರುತ್ತಾರೆ ಮತ್ತು ಮುಂದುವರಿದು ಎದುರುದಾರರು ತನ್ನ ಲಿಖಿತ ಹೇಳಿಕೆಯಲ್ಲಿ ಒಬ್ಬ ಜಗದೀಶ ಎಂಬವನು ಖರೀದಿ ಮಾಡಿದ್ದು ಮತ್ತು ಅದಕ್ಕೆ ಸಂಬಂದಪಟ್ಟ ಹಣವನ್ನು ಆತನೇ ಪಾವತಿಸಿರುತ್ತಾರೆ ಎಂದು ತಿಳಿಸಿರುತ್ತಾರೆ.
ಆದುದರಿಂದ ದೂರುದಾರನು ಎದುರುದಾರನ ಗ್ರಾಹಕನಾಗಿದ್ದಾನೆಯೇ ಎಂಬುದನ್ನು ದೂರುದಾರನು ಈ ಪ್ರಕರಣದಲ್ಲಿ ತೋರಿಸಿಕೊಡಬೇಕಾಗುತ್ತದೆ. ಈ ಪ್ರಕರಣವನ್ನು ಗ್ರಾಹಕರ ಸಂರಕ್ಷಣಾ ಕಾಯ್ದೆ 2019 ರ ಕಲಂ 35 ರ ಅಡಿಯಲ್ಲಿ ಸಲ್ಲಿಸಿರುತ್ತಾರೆ.
ಗ್ರಾಹಕರ ಸಂರಕ್ಷಣಾ ಕಾಯ್ದೆ2019 ರ ಕಲಂ 2(7) ಈ ಕೆಳಕಂಡಂತೆ ತಿಳಿಸುತ್ತದೆ:
2(7) "consumer" means any person who—
- buys any goods for a consideration which has been paid or promised or partly paid and partly promised, or under any system of deferred payment and includes any user of such goods other than the person who buys such goods for consideration paid or promised or partly paid or partly promised, or under any system of deferred payment, when such use is made with the approval of such person, but does not include a person who obtains such goods for resale or for any commercial purpose;”
ಆದ್ದರಿಂದ ಗ್ರಾಹಕರ ಸಂರಕ್ಷಣಾ ಕಾಯ್ದೆ2019 ರ ಕಲಂ2(7) ನ್ನು ಗಮನಿಸಿದಾಗ ಅಂತಹ ಗ್ರಾಹಕನು ತಾನು ಖರೀದಿ ಮಾಡಿದ ಯಾವುದೇ ಸಾಮಾಗ್ರಿಗೆ ಹಣವನ್ನು ಪಾವತಿಸಬೇಕಾಗುತದೆ. ಆದರಿಂದ ದೂರುದಾರರು ಈ ಪ್ರಕರಣದಲ್ಲಿ ತೋರಿಸಲಾದ ಟಿ.ವಿ ಯನ್ನು ರೂ.9,000/- ನೀಡಿ ಎದುರುದಾರರ ಕಡೆಯಿಂದ ಖರೀದಿ ಮಾಡಿ ಆ ಬಗ್ಗೆ ಆತನ ಹೆಸರಿಗೆ ಎದರುದಾರರು ಖರೀದಿ ಬಿಲ್ಲನ್ನು ನೀಡಿದ್ದಾರೆ ಎಂದು ತೋರಿಸಿಕೊಡಬೇಕಾಗುತ್ತದೆ. ಆದರೆ ಸ್ವತಃ ದೂರುದಾರನು ತನ್ನ ದೂರಿನಲ್ಲಿ ಆ ಟಿ.ವಿ ಗೆ ಬಂದಪಟ್ಟ ಹಣವನ್ನು ಜಗದೀಶರವರ ಖಾತೆಯಿಂದಲೇ ಪಾವತಿಸಿರುತ್ತಾನೆ. ಎಂದು ತಿಳಿಸಿರುತ್ತಾರೆ. ಆದ್ದರಿಂದ ನಿಶಾನೆ ಸಿ-1. ಎದುರುದಾರರು ಕೊಟ್ಟಿದ್ದ ರಶೀದಿಯನ್ನು ಗಮನಿಸಿದಾಗ ಒಬ್ಬ ಜಗದೀಶ ಎನ್ನುವ ಗ್ರಾಹಕನ ವಿಳಾಸ ತೋರಿಸಲಾಗಿದೆ.
ಆದ್ದರಿಂದ ಸ್ವತಃ ದೂರುದಾರರು ಸಂಬಂದಪಟ್ಟ ಟಿ.ವಿ ಯನ್ನು ಆತನೇ ಖರೀದಿಸಿದ ಬಗ್ಗೆ ಯಾವುದೇ ದಾಖಲಾತಿಯನ್ನು ಹಾಜರುಪಡಿಸಿಲ್ಲಾ. ಆದ್ದರಿಂದ ದೂರುದಾರರು ಎದುರುದಾರರ ಗ್ರಾಹಕನಾಗಿರುವುದಿಲ್ಲಾ. ಗ್ರಾಹಕರ ಸಂರಕ್ಷಣಾ ಕಾಯ್ದೆ2019 ರ ಕಲಂ2(7) ರಲ್ಲಿ ದೂರುದಾರರು ಈ ಪ್ರಕರಣದಲ್ಲಿ ಎದುರುದಾರರ ಗ್ರಾಹಕನಾಗದ ಕಾರಣ ಆತನು ಸಲ್ಲಿಸಿರುವ ಇಂತಹ ಪ್ರಕರಣದಲ್ಲಿ ತೀಮಾ೯ನಿಸಲು ಈ ಆಯೋಗದ ವ್ಯಾಪ್ತಿಗೆ ಬರದ ಕಾರಣ ಈ ಪ್ರಕರಣದಲ್ಲಿ ದೂರುದಾರರಿಗೆ ಯಾವುದೇ ಪರಿಹಾರವನ್ನು ಕೊಡಲು ಬರುವುದಿಲ್ಲ ಆದ್ದರಿಂದ ಅಂಶ -1ನ್ನು ಸಕಾರಾತ್ಮಕವಾಗಿ ತಿಮಾ೯ನಿಸಲಾಗಿದೆ..
ಅಂಶ-2
ಈಗಾಗಲೇ ಅಂಶ1 ರಲ್ಲಿ ಈ ಅಯೋಗವು ಇಂತಹ ಪ್ರಕರಣವನ್ನು ವಿಚಾರಿಸಲು
ತನ್ನ ಆಯೋಗದ ವ್ಯಾಪ್ತಿಗೆ ಒಳಪಡುವುದಿಲ್ಲಾ ಎಂದು ಅಭಿಪ್ರಾಯ ಪಟ್ಟ ಕಾರಣ ಎದುರುದಾರರು ತಾವು ಉತ್ಪಾದಿಸಿದ ಟಿ.ವಿಯಲ್ಲಿ ನ್ಯೂನ್ಯತೆ ಇದೆ ಎಂಬುದನ್ನು ತೋರಿಸಿಕೊಡಲು ದೂರುದಾರನಿಗೆ ಬರುವುದಿಲ್ಲ ಎಂದು ಅಭಿಪ್ರಾಯ ಪಟ್ಟ ಕಾರಣ ಅಂಶ 2ನ್ನು ಆ ಬಗ್ಗೆ ವಿಚಾರಿಸುವ ಅವಶ್ಯಕತೆ ಬರುವುದಿಲ್ಲ ಎಂದು ನಾವು ಅಭಿಪ್ರಾಯಪಡುತ್ತೆವೆ.
ಅಂಶ-3
ಅಂಶ-1ನ್ನು ಈಗಾಗಲೇ ಸಕಾರಾತ್ಮಕವಾಗಿ ಮತ್ತು ಅಂಶ -2ನ್ನು ವಿಚಾರಿಸಲು ಬರುವುದಿಲ್ಲ ಎಂದು ಈ ಆಯೋಗವು ಅಭಿಪ್ರಾಯ ವ್ಯಕ್ತ ಪಡಿಸಿದ ಕಾರಣ ದೂರುದಾರನಿಗೆ ಯಾವುದೇ ಪರಿಹಾರವನ್ನು ಈ ದೂರಿನಲ್ಲಿ ಕೊಡಲು ಬರುವುದಿಲ್ಲ.
ಅಂಶ-4:
ಕಾರಣ ಈ ಕೆಳಕಂಡಂತೆ ಆದೇಶ ಮಾಡುತ್ತೆವೆ.
ಆದೇಶ
ಗ್ರಾಹಕರ ಸಂಕ್ಷಣಾ ಕಾಯ್ದೆ 1986 ಕಲಂ 35 ರ ಅಡಿಯಲ್ಲಿ ದೂರುದಾರರು ಹಾಕಿರುವ ದೂರನ್ನು ರೂ.2000/- ಖಚು೯ ಸಮೇತ ವಜಾಮಾಡಲಾಗಿದೆ.
ಈ ಆದೇಶದ ಪ್ರತಿಯನ್ನು ಉಭಯಪಕ್ಷದವರಿಗೆ ಯಾವುದೇ ಖಚು೯ ಇಲ್ಲದೆ ನೀಡತ್ತಕ್ಕದ್ದು.
(ಪುಟ ಸಂಖ್ಯೆ 01 ರಿಂದ 09 ರವರೆಗೆ ಉಖ್ತಲೇಖನವನ್ನು ಅಧ್ಯಕ್ಷರು ಶೀಘ್ರಲಿಪಿಗಾತಿ೯ಯವರಿಗೆ ನೀಡಿದ್ದು ಅನಂತರ ಅದನ್ನು ಪರಿಶೀಲನೆ ಮಾಡಿ ದಿನಾಂಕ 26.11.2021 ರಂದು ತೆರೆದ ಆಯೋಗದ ಮುಂದೆ ಘೋ಼ ಷಿಸಲಾಯಿತು.)
(©. ¤ªÀÄð®PÀĪÀiÁgï) (¹. gÉÃtÄPÁA§) (¥ÀæPÁ±ï.PÉ)
¸ÀzÀ¸ÀågÀÄ ¸ÀzÀ¸ÀågÀÄ CzsÀåPÀëgÀÄ
ಅನುಬಂಧ
ದೂರುದಾರರ ಪರವಾಗಿ ಸಾಕ್ಷಿ:
CW-1: ವಿಜಯ ರೈ
ದೂರುದಾರರ ಪರವಾಗಿ ಸಲ್ಲಿಸಿರುವ ದಾಖಲೆಗಳು:
ನಿಶಾನೆ ಸಿ-1 :ರಶೀದಿ
ನಿಶಾನೆ ಸಿ-2: ಅಂಚೆ ರಶೀದಿ
ನಿಶಾನೆ ಸಿ-3: ವಾರಂಟಿ ಕಾಡ್‌೯
ಎದುರುದಾರರ ಪರವಾಗಿ ಸಾಕ್ಷಿ:
RW-1: ಮಂಜು ಗೌಡ
ಎದುರುದಾರರ ಪರವಾಗಿ ಸಲ್ಲಿಸಿರುವ ದಾಖಲೆಗಳು
-