ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಂಗಳೂರು
ಉಪಸ್ಥಿತಿ: 1. ಶ್ರೀ ಕೆ.ಎಸ್.ಬೀಳಗಿ, ಅಧ್ಯಕ್ಷರು,
2. ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ, ಮಹಿಳಾ ಸದಸ್ಯರು,
3. ಶ್ರೀ ಹೆಚ್.ಜನಾರ್ಧನ್, ಸದಸ್ಯರು
ಆದೇಶ
ಸಿ.ಸಿ.ಸಂಖ್ಯೆ:1705/2018
ಆದೇಶ ದಿನಾಂಕ 16ನೇ ಸೆಪ್ಟೆಂಬರ್ 2022
ಪ್ರಣಬ್ ಪಾಲ್,
ಬಿನ್. ಪುಷ್ಪೇಂದು ಪಾಲ್,
ನಂ. ಕ್ಯೂ 703, ರೆಹನ್ ಜಾರೊಕಾ ಕೆಂಪಾಪುರ ಯೆಮಲುರ್ ಪೋಸ್ಟ್, ಬೆಂಗಳೂರು 560 037.
(ಪ್ರತಿನಿಧಿಸುವವರು ಶ್ರೀ ತುಷಾರ್, ವಕೀಲರು)
-ಪಿರ್ಯಾದುದಾರರು
ವಿರುದ್ಧ
1. ಪ್ರಭಾವತಿ ಬಿಲ್ಡರ್ಸ್ ಡೆವಲಪ್ಪರ್ ಪ್ರೈವೆಟ್ ಲಿಮಿಟೆಡ್,
ನಂ.80, 2ನೇ ಮಹಡಿ, 1ನೇ ಕ್ರಾಸ್, 2ನೇ ಮೇನ್, ವೈಶ್ಯ ಬ್ಯಾಂಕ್ ಗೃಹ ನಿರ್ಮಾಣ ಸಂಘ ಲೇಔಟ್,
ರಿಲಯನ್ಸ್ ಪ್ರೆಶ್ ಹತ್ತಿರ ಬಿಟಿಎಂ 2ನೇ ಹಂತ,
ಬೆಂಗಳೂರು.
ಪ್ರಭಾವತಿ ಬಿಲ್ಡರ್ಸ್ ಡೆವಲಪ್ಪರ್ ಪ್ರೈವೆಟ್ ಲಿಮಿಟೆಡ್‍ನ
ಜನರಲ್ ಪವರ್ ಆಫ್ ಅಟಾರ್ನಿ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಬಿ.ಇ.ಪ್ರವೀಣ್ ಕುಮಾರ್
2. ಶ್ರೀ ಮುನಿರೆಡ್ಡಿ, (ಕನ್ವರ್‍ಟೆಡ್ ಲ್ಯಾಂಡ್‍ನ ಮಾಲೀಕರು)
ಸರ್ವೆ ನಂ.129/1, ಖಾತ ನಂ.57, ರಾಯಸಂದ್ರ ಹಳ್ಳಿ, ಸರ್ಜಪುರ ಹೋಬಳಿ,
ಅನೇಕಲ್ ತಾಲ್ಲೂಕು, ಹುಸ್ಕೂರು ಪೋಸ್ಟ್, ಬೆಂಗಳೂರು 560 035.
3. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ,
ಬ್ರಾಂಚ್ ಆಫೀಸ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್,
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆರ್‍ಎಸಿಪಿಸಿ, ಮಲ್ಲೇಶ್ವರಂ, ಬೆಂಗಳೂರು 560 001.
… ಎದುರುದಾರರು
ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ
ಮಹಿಳಾ ಸದಸ್ಯರು,
1. ದೂರುದಾರರು ಎದುರುದಾರರ ವಿರುದ್ಧ ಗ್ರಾಹಕರ ಸಂರಕ್ಷಣಾ ಕಾಯ್ದೆ 1986ರ ಕಲಂ 12 ರ ಅಡಿಯಲ್ಲಿ ದೂರನ್ನು ಸಲ್ಲಿಸಿದ್ದು, 1ರಿಂದ 2ನೇ ಎದುರುದಾರರಿಂದ ನಿವೇಶನ ಮುಂಗಡ ಮೊತ್ತವನ್ನು ಮರುಪಾವತಿಸುವಂತೆ ಕೋರಿರುತ್ತಾರೆ.
ಅ) ತ್ರಿಪಾರ್ಟಿ ಒಪ್ಪಂದದಲ್ಲಿ ಒಪ್ಪಿಕೊಂಡಂತೆ ಪ್ಲಾಟ್‍ನ್ನು ನಿರ್ಮಿಸಲು ಮತ್ತು ವಿತರಿಸಲು 1ನೇ ಎದುರುದಾರರಿಗೆ ನಿರ್ದೇಶಿಸುವಂತೆ ಮತ್ತು
ಆ) 3ನೇ ಎದುರುದಾರರಿಂದ ಬಾಕಿ ಊಳಿದ ಸಾಲದ ಮೊತ್ತವನ್ನು ವಸೂಲಿ ಪ್ರಕ್ರಿಯೆಯನ್ನು ನಿಲ್ಲಿಸಲು ಮತ್ತು ಸರಿಪಡಿಲಾಗದ ಹಾನಿಯನ್ನು ಉಂಟು ಮಾಡಿದ ಮತ್ತು ಇದರಿಂದ ಉಂಟಾದ ಮಾನಸಿಕ ಹಿಂಸೆಯನ್ನು ಸರಿಪಡಿಸಲು ರೂ.10,00,000/- ಪರಿಹಾರ ಧನವನ್ನು 3ನೇ ಎದುರುದಾರರಿಂದ ಕೊಡುವಂತೆ ನಿರ್ದೇಶನಬೇಕೆಂದು
ಇ) ಮಾನಸಿಕ ಹಿಂಸೆ ಪರಿಹಾರ ರೂಪವಾಗಿ 1ನೇ ಎದುರುದಾರರಿಂದ ರೂ.3,00,000/- ರೂಪಾಯಿಗಳನ್ನು ನೀಡುವಂತೆ ನಿರ್ದೇಶಿಸಬೇಕೆಂದು ಮತ್ತು
ಈ) ಇತರೆ ಯಾವುದೇ ಪರಿಹಾರಗಳನ್ನು ಕೊಡುವಂತೆ ನಿರ್ದೇಶಿಸಿ ಆದೇಶವನ್ನು ನೀಡುವಂತೆ ಈ ಆಯೋಗಕ್ಕೆ ಕೋರಿರುತ್ತಾರೆ.
2. ದೂರುದಾರನ ದೂರಿನ ಅಂಶಗಳು ಈ ಕೆಳಗಿನಂತೆ ಇರುತ್ತವೆ:-
ದೂರುದಾರರು ಬೆಂಗಳೂರಿನಲ್ಲಿ ವಾಸಿಸಲು ಎರಡು ನಿವೇಶನವನ್ನು ಖರೀದಿಸಲು ಯೋಚಿಸಿದ್ದು, ಅದರಂತೆ 1 ಮತ್ತು 2ನೇ ಎದುರುದಾರರನ್ನು ಸಂಪರ್ಕಿಸಿದಾಗ, ಸದರಿ ನಿರ್ಮಾಣದಲ್ಲಿ ಎರಡು ಪ್ಲಾಟ್ ಅನ್ನು ದೂರುದಾರರಿಗೆ ಮಂಜೂರು ಮಾಡಲು ಭರವಸೆ ನೀಡಿ, ಒಂದು ನಿವೇಶನಕ್ಕೆ ರೂ.42,00,000/- ರಂತೆ ಒಟ್ಟು ರೂ.84,00,000/- ಗಳನ್ನು ದಿನಾಂಕ 30.05.2016ರ ತ್ರಿಪಾರ್ಟಿ ಒಪ್ಪಂದ ಮಾಡಕೊಂಡಿದ್ದು, ಮುಂಗಡ ಹಣ ರೂ.9,80,000/- ಪ್ಲಾಟ್ ಸಂಖ್ಯೆ ಎಸ್-5 ಮತ್ತು ರೂ.9,80,000/- ಗಳನ್ನು ಪ್ಲಾಟ್ ಸಂಖ್ಯೆ ಟಿ-5 ಗೆ ದಿನಾಂಕ 18.05.2016ರಂದು ರಶೀದಿಯನ್ನು ದಾಖಲಿಸಿರುತ್ತಾರೆ. ವಿವಿಧ ಹಂತಗಳಲ್ಲಿ ಗೃಹ ನಿರ್ಮಾಣದ ಕಾರ್ಯದಲ್ಲಿಯ ಪ್ರಗತಿಯನ್ನು ಗಮನಿಸಿ 1ನೇ ಎದುರುದಾರರಿಗೆ ಸಾಲವನ್ನು ಮಂಜೂರು ಮಾಡಲು 3ನೇ ಎದುರುದಾರರಿಗೆ ಸಾಲವನ್ನು ಮಂಜೂರು ಮಾಡಲು ಒಪ್ಪಿಕೊಂಡರೂ ಸಹ 3ನೇ ಎದದುರುದಾರರನ್ನು ಷರತ್ತನ್ನು ಮಾನ್ಯ ಮಾಡಿದೆ ಮಾರಾಟದ ಒಪ್ಪಂದ ಮೇರೆಗೆ ಪೂರ್ತಿ ಹವನ್ನು ಮಂಜೂರು ಮಾಡದೆ ದೂರುದಾರರು ದಿನಾಂಕ 24.09.2016ರಂದು 1ನೇ ಎದುರುದಾರರ ಆಫೀಸಿಗೆ ಹೋದಾಗ ಅಲ್ಲಿ 1ನೇ ಎದುರುದಾರರು ತಲೆಮರೆಸಿಕೊಂಡು ಹೋಗಿದ್ದು ತಿಳಿದು ಮಾನಸಿಕವಾಗಿ ಮತ್ತು ದೈಹಿಕವಾಗಿ ನೊಂದು ಪರಪ್ಪನ ಅಗ್ರಹಾರದ ಪೊಲೀಸ್ ಠಾಣೆಗೆ ದೂರು ನೀಡಿದರು ಪ್ರಯೋಜನವಾಗದೆ ಎದುರುದಾರರು ಸೇವಾ ನ್ಯೂನತೆ ಎಸಗಿದ್ದಾರೆಂದು ಈ ಆಯೋಗಕ್ಕೆ ದೂರು ಸಲ್ಲಿಸಿರುತ್ತಾರೆ.
3. ದೂರನ್ನು ಅಂಗೀಕರಿಸಿದ ಬಳಿಕೆ ಎದುರುದಾರರಾದ 1, 2 ಮತ್ತು 3 ರವರಿಗೆ ನೋಟೀಸ್ ಜಾರಿಯಾದರೂ ಸಹ ಎದುರುದಾರರು ಆಯೋಗದ ಮುಂದೆ ಹಾಜರಾಗದ ಕಾರಣ ಏಕಪಕ್ಷೀಯ ಎಂದು ಪರಿಗಣಿಸಲಾಯಿತು.
4. ದೂರುದಾರರು ಸಹ ಯಾವುದೇ ನುಡಿ ಸಾಕ್ಷ್ಯವನ್ನು ಸಲ್ಲಿಸಿರುರುವುದಿಲ್ಲ ಆದರೆ ದಾಖಲಾತಿಗಳನ್ನು ಪುಟ 11 ರಿಂದ 50 ರವರೆಗೆ ಸಲ್ಲಿಸಿರುತ್ತಾರೆ ಮತ್ತು ಲಿಖಿತವಾದವನ್ನು ಸಹ ಹಾಜರುಪಡಿಸಿರುವುದಿಲ್ಲ, ದೂರನ್ನು ಆದೇಶಕ್ಕಾಗಿ ಇಡಲಾಗಿದೆ.
5. ಈ ಕೆಳಕಂಡ ಅಂಶಗಳು ನಮ್ಮ ತೀರ್ಮಾನಕ್ಕಾಗಿ ಮೂಡಿ ಬಂದಿವೆ.
(1) ದೂರುದಾರನು ಎದುರುದಾರರ ಕರ್ತವ್ಯ ಲೋಪ, ಅನುಚಿತ ವ್ಯಾಪಾರ ಪದ್ಧತಿಯನ್ನು ಅನುಸರಿಸಿ ಮತ್ತು ಸೇವಾ ನ್ಯೂನ್ಯತೆ ಎಸಗಿದ್ದಾರೆ ಎನ್ನುವ ಸಂಗತಿಯನ್ನು ಸಾಬೀತು ಪಡಿಸಿದ್ದಾರೆಯೇ? ಹಾಗಿದ್ದಲ್ಲಿ ಆತ ಕೇಳಿಕೊಂಡ ಪರಿಹಾರಕ್ಕೆ ಅರ್ಹರೇ?
(2) ಆದೇಶ ಏನು?
6. ಮೇಲ್ಕಂಡ ಅಂಶಗಳನ್ನು ಈ ಕೆಳಕಂಡ ಕಾರಣಕ್ಕಾಗಿ ಈ ರೀತಿ ನಿರ್ಣಯಿಸಿದ್ದೇವೆ.
• 1ನೇ ಅಂಶ - ನಕಾರಾತ್ಮಕವಾಗಿ
• 2ನೇ ಅಂಶ - ಅಂತಿಮ ತೀರ್ಪಿನ ಪ್ರಕಾರ
ಕಾರಣಗಳು
7. 1 ನೇ ಅಂಶದ ಮೇಲೆ:- ದೂರುದಾರರು ತನ್ನ ದೂರಿನಲ್ಲಿ ವಿವರಿಸಿದ ಸಂಗತಿಗಳನ್ನು ನಾವೂ ಈಗಾಗಲೇ ಸುದೀರ್ಘವಾಗಿ ಪ್ಯಾರಾ 2ರಲ್ಲಿ ವಿವರಿಸಿದ್ದೇವೆ. ಪ್ರಸ್ತುತ ಪ್ರಕರಣದಲ್ಲಿ ಎದುರುದಾರರು 1, 2 ಮತ್ತು 3 ಇವರಿಗೆ ಆಯೋಗದಿಂದ ನೋಟೀಸ್ ಜಾರಿಯಾಗಿದ್ದು ಸಹ ಈ ಆಯೋಗದ ಮುಂದೆ ಹಾಜರಾಗದೆ ಗೈರು ಹಾಜರಾಗಿರುತ್ತಾರೆ. ಈ ಕಾರಣಕ್ಕಾಗಿ ಎದುರುದಾರರನ್ನು ಏಕಪಕ್ಷೀಯ ಎಂದು ನಿರ್ಣಯಿಸಲಾಗಿದೆ. ದೂರುದಾರರು ತನ್ನ ಅಹವಾಲನ್ನು ಸರಿಪಡಿಸಲು ಸಾಬೀತು ಪಡಿಸಲು ನುಡಿ ಸಾಕ್ಷ್ಯವನ್ನು ಸಲ್ಲಿಸಿರುವುದಿಲ. ದಾಖಲು 11 ರಿಂದ 50ರವರೆಗೆ ಹಾಜರುಪಡಿಸಿರುತ್ತಾರೆ.
8. ದೂರುದಾರರು ನಿವೇಶನ ಖರೀದಿಸಲು ಮುಂಗಡ ಹಣವನ್ನು ದಿನಾಂಕ 18.05.2018ರಂದು ರೂ.9,80,000/- ಗಳನ್ನು ಪ್ಲಾಟ್ ಸಂಖ್ಯೆ ಎಸ್-5 ಮತ್ತು ರೂ.9,80,000/- ಗಳನ್ನು ಪ್ಲಾಟ್ ಸಂಖ್ಯೆ ಟಿ-5 ಗೆ ಎದುರುದಾರರಿಗೆ ಪಾವತಿಸಿದ್ದು, ರಶೀದಿಯನ್ನು ಹಾಜರುಪಡಿಸಿ ಮತ್ತು 3ನೇ ಎದುರುದಾರರಿಂದ ಸಾಲ ಪಡೆದು ದೂರುದಾರರ ಖಾತೆಗೆ ಜಮಾ ಮಾಡದೆ ಅದನ್ನು 1ನೇ ಎದುರುದಾರರ ಖಾತೆಗೆ ಜಮಾ ಮಾಡಿದಂತೆ ಯಾವ ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲ. ದೂರುದಾರರಿಂದ 1 ಮತ್ತು 2ನೇ ಎದುರುದಾರರಿಗೆ ಸಾಲದ ಪೂರ್ತಾ ಹಣ ಸಂದಾಯವಾದಂತೆ ಮೇಲ್ನೋಟಕ್ಕೆ ಕಂಡುಬಂದಿರುವುದಿಲ್ಲ. ದೂರುದಾರರಿಂದ ಗೃಹ ನಿರ್ಮಾಣದ ಹಣವನ್ನು 1 ಮತ್ತು 2ನೇ ಎದುರುದಾರರಿಗೆ ಪಾವತಿಸಿದಂತೆ ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲ. ಪೂರ್ತಾ ಹಣ ಸಂದಾಯವಾಗದೆ, ದೂರುದಾರರಿಗೆ ನಿವೇಶನ ಸ್ವಾಧೀನ ಮತ್ತು ಖರೀದಿಯ ಮಾರಾಟ ಪತ್ರವನ್ನು ಕೇಳುವ ಹಕ್ಕನ್ನು ದೂರುದಾರರು ಹೊಂದಿರುವುದಿಲ್ಲ. ಆದಕಾರಣ 1ನೇ ಅಂಶವನ್ನು ನಕಾರಾತ್ಮಕವಾಗಿ ನಿರ್ಣಯಿಲಾಗಿದೆ.
9. ನೊಂದಾಯಿತ ಮಾರಾಟದ ಪತ್ರದ ಅನುಪಸ್ಥಿತಿಯಲ್ಲಿ ಮತ್ತು ಬಾಕಿ ಮೊತ್ತವನ್ನು ಪಾವತಿಸದಿದ್ದಲ್ಲಿ ದೂರುದಾರರಿಗೆ ತ್ರಿಪಾರ್ಟಿ ಒಪ್ಪಂದದಲ್ಲಿ ಒಪ್ಪಿಕೊಂಡ ಪ್ಲಾಟ್ ಅನ್ನು ನಿರ್ಮಿಸಲು ಮತ್ತು ವಿತರಿಸುವಂತೆ ನಿರ್ದೆಶಿಸಲು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ. ಆದಕಾರಣ ದೂರನ್ನು ವಜಾ ಮಾಡಲು ನಿರ್ದೇಶಿಸಿದೆ.
10. 2ನೇ ಅಂಶದ ಮೇಲೆ:- ಮೇಲೆ ಉಲ್ಲೇಖಿಸಲಾದ ಚರ್ಚೆಗಳ ದೃಷ್ಠಿಯಿಂದ ದೂರನ್ನು ವಜಾಗೊಳಿಸಲಾಗಿದೆ. ಅದರಂತೆ ಈ ಕೆಳಕಂಡ ಆದೇಶವನ್ನು ಮಾಡಿದ್ದೇವೆ.
ಆದೇಶ
1. ದೂರನ್ನು ಖರ್ಚು ರಹಿತ ವಜಾ ಮಾಡಲಾಗಿದೆ.
2. ಈ ಆದೇಶದ ಪ್ರತಿಗಳನ್ನು ನಿಯಮಾನುಸಾರ ಉಭಯಪಕ್ಷಕಾರರಿಗೆ ಉಚಿತವಾಗಿ ನೀಡತಕ್ಕದ್ದು.
(ಶೀಘ್ರಲಿಪಿಗಾರರಿಗೆ ಉಕ್ತಲೇಖನ ನೀಡಿ, ಬೆರಳಚ್ಚು ಮಾಡಿಸಿ, ತಪ್ಪುಗಳನ್ನು ನೋಡಿ ಸರಿಪಡಿಸಿ ಅಂತಿಮ ಆದೇಶವನ್ನು 16ನೇ ಸೆಪ್ಟೆಂಬರ್ 2022 ರಂದು ತೆರೆದ ನ್ಯಾಯಾಲಯದಲ್ಲಿ ಘೋಷಿಸಲಾಯಿತು)
(ರೇಣುಕಾದೇವಿ ದೇಶ್‍ಪಾಂಡೆ) ಮಹಿಳಾ ಸದಸ್ಯರು
(ಹೆಚ್.ಜನಾರ್ಧನ್)ಸದಸ್ಯರು
(ಕೆ.ಎಸ್.ಬೀಳಗಿ)ಅಧ್ಯಕ್ಷರು