Karnataka

Bangalore Urban

CC/19/1333

Smt. Sudha Raghavendran - Complainant(s)

Versus

Gruha Kalyan - Opp.Party(s)

Sri. V.L.K. Rao

30 Nov 2022

ORDER

DISTRICT CONSUMER DISPUTES REDRESSAL COMMISSION,
8TH FLOOR, B.W.S.S.B BUILDING, K.G.ROAD,BANGALORE-09
 
Complaint Case No. CC/19/1333
( Date of Filing : 21 Aug 2019 )
 
1. Smt. Sudha Raghavendran
W/o Sheshagiri Raghavendran, Aged about 57 years R/at C/o Raghavendra Nilaya, No.100,4th Cross,10th Main, 3rd Block,Thyagarajanagar, Bangalore-560028.
...........Complainant(s)
Versus
1. Gruha Kalyan
Rep by its M.D.Siddarudha Hunnashikatti, Registered Office at, No.32/A, 9th main, Sector-6, HSR Layout, Near Empire Hotel, Bangalore-560102
2. Sachin Nayak
Chairman, No.32/A, 9th main, Sector-6, HSR Layout, Near Empire Hotel, Bangalore-560102.
............Opp.Party(s)
 
BEFORE: 
 HON'BLE MRS. M. SHOBHA PRESIDENT
 HON'BLE MS. Renukadevi Deshpande MEMBER
 
PRESENT:
 
Dated : 30 Nov 2022
Final Order / Judgement
ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಂಗಳೂರು
ಉಪಸ್ಥಿತಿ: 1. ಶ್ರೀಮತಿ ಎಂ.ಶೋಭಾ  ಅಧ್ಯಕ್ಷರು,
         2. ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ, ಮಹಿಳಾ ಸದಸ್ಯರು,
 
ಆದೇಶ 
 
ಸಿ.ಸಿ.ಸಂಖ್ಯೆ:1333/2019
ಆದೇಶ ದಿನಾಂಕ 30ನೇ ನವೆಂಬರ್ 2022
ಶ್ರೀಮತಿ ಸುಧಾ ರಾಘವೇಂದ್ರನ್,
ಕೋಂ. ಶೇಷಗಿರಿ ರಾಘವೇಂದ್ರನ್,
ರಾಘವೇಂದ್ರ ನಿಲಯ, ನಂ.100,
4ನೇ ಕ್ರಾಸ್, 10ನೇ ಮೇನ್,
3ನೇ ಬ್ಲಾಕ್, ತ್ಯಾಗರಾಜನಗರ,
ಬೆಂಗಳೂರು 560 028.
 
(ವಕೀಲರು ಶ್ರೀ ವಿ.ಎಲ್.ಕೆ.ರಾವ್)                                   
 
 
 
 
-ಪಿರ್ಯಾದುದಾರರು
       ವಿರುದ್ಧ
ಗೃಹ ಕಲ್ಯಾಣ,
ಪ್ರತಿನಿಧಿಸುವವರು ಎಂ.ಡಿ. ಸಿದ್ದರೂಢ ಹುಣಸಿಕಟ್ಟಿ,
ನಂ.32/ಎ, 9ನೇ ಮುಖ್ಯ, ಸೆಕ್ಟರ್-6, ಹೆಚ್‍ಎಸ್‍ಆರ್ ಲೇಔಟ್, ಎಂಪೈರ್ ಹೋಟೆಲ್ ಹತ್ತಿರ, ಬೆಂಗಳೂರು-560102.
 
… ಎದುರುದಾರರು
ಶ್ರೀ ಸಚಿನ್ ನಾಯಕ್,
ಚೇರ್‍ಮೆನ್,
ನಂ.32/ಎ, 9ನೇ ಮುಖ್ಯ, ಸೆಕ್ಟರ್-6, ಹೆಚ್‍ಎಸ್‍ಆರ್ ಲೇಔಟ್, ಎಂಪೈರ್ ಹೋಟೆಲ್ ಹತ್ತಿರ, ಬೆಂಗಳೂರು-560102. 
 
(ಏಕಪಕ್ಷೀಯ)
ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ 
ಮಹಿಳಾ ಸದಸ್ಯರು,
 
1. ದೂರುದಾರರು ಎದುರುದಾರರ ವಿರುದ್ಧ ಗ್ರಾಹಕರ ಸಂರಕ್ಷಣಾ ಕಾಯ್ದೆ 1986 ರ ಕಲಂ 12ರ ಅಡಿಯಲ್ಲಿ ದೂರು ಸಲ್ಲಿಸಿದ್ದು, 
ಎ) ದೂರುದಾರರು ಎದುರುದಾರರಿಂದ ನಿವೇಶನ ಮುಂಗಡ (ಬುಕಿಂಗ್) ಮೊತ್ತ ರೂ.4,00,000/-, ಮುಂಗಡ ಮೊತ್ತ ಪಾವತಿಸಿದ ದಿನಾಂಕದಿಂದ ಪರಿಹಾರ ಸಿಗುವವರೆಗೆ 18% ಬಡ್ಡಿಯೊಂದಿಗೆ ಪರಿಹಾರ ನೀಡುವಂತೆ 
ಏ) ಸೇವಾ ನ್ಯೂನತೆಗಾಗಿ ರೂ.50,000/- ಪರಿಹಾರ ರೂಪವಾಗಿ ಪಾವತಿಸುವಂತೆ 
ಐ) ಮಾನಸಿಕ ಮತ್ತು ದೈಹಿಕ ಹಿಂಸೆ ಹಾಗೂ ಸಮಯದ ನಷ್ಟಕ್ಕಾಗಿ ರೂ.50,000/- ಗಳನ್ನು ಪಾವತಿಸುವಂತೆ 
ಒ) ಸೂಕ್ತವೆಂದು ಪರಿಗಣಿಸಲಾದ ಇತರೆ ಪರಿಹಾರಗಳನ್ನು ಪಾವತಿಸುವಂತೆ ನಿರ್ದೇಶಿಸಿ ಆದೇಶವನ್ನು ನೀಡುವಂತೆ, ಆಯೋಗಕ್ಕೆ ಕೋರಿರುತ್ತಾರೆ. 
2. ದೂರುದಾರನ ದೂರಿನ ಅಂಶಗಳು ಈ ಕೆಳಗಿನಂತೆ ಇರುತ್ತವೆ:-
ದೂರುದಾರರು ವಾಸಿಸಲು ಒಂದು ನಿವೇಶನವನ್ನು ಹುಡುಕುತ್ತಿರುವಾಗ, ದೈನಂದಿನ ಸುದ್ದಿ ಪತ್ರಿಕೆಗಳಲ್ಲಿ ಮತ್ತು ದೂರದರ್ಶನ ಚಲನಗಳಲ್ಲಿ ಸಾರ್ವಜನಿಕರಿಗೆ ಎದುರುದಾರರನ್ನು ಸಂಪರ್ಕಿಸಲು ಆಕರ್ಷಕ ಜಾಹಿರಾತುಗಳೊಂದಿಗೆ ಜಾಹಿರಾತು ನೀಡಿದ್ದರು. ಬೆಂಗಳೂರು ನಗರದ ವಿವಿಧ ಬಾಗಗಳಲ್ಲಿ ಕನಕಪುರ ರಸ್ತೆ, ಮೈಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಾಳ್, ಬೆಳ್ಳಂದೂರು ಮುಂತಾದ ಕಡೆ ನಿವೇಶನಗಳನ್ನು ಪ್ಲಾಟ್‍ಗಳ ಹಂಚಿಕೆಗಾಗಿ ಕಂಪನಿಯ ಹೆಸರಿನಲ್ಲಿ ಪ್ರಕಟಿಸುವ ಮೂಲಕ ಆರ್‍ಎಸ್‍ಬಿ ಕ್ರಿಕೇಟ್ ಆಟಗಾರರ ಬೃಹತ್ ಸೈನ್ ಬೊರ್ಡ್‍ಗಳನ್ನು ಹಾಕುತ್ತಾರೆ.  ಕಂಪನಿಯ ಲಾಂಚನವನ್ನು ಹೊಂದಿರುವ ಟೀ-ಷರ್ಟ್‍ಗಳನ್ನು ಮತ್ತು ಮುಂಬರುವ ಪ್ರಾಜೆಕ್ಟ್‍ಗಳನ್ನು ಮಾರಾಟಕ್ಕಾಗಿ ಜಾಹಿರಾತು ಮುಖಾಂತರ ನೀಡುವುದು ಬೆಂಗಳೂರು ಸುತ್ತಮುತ್ತಲಿನ ನಿವೇಶನ/ಪ್ಲಾಟ್‍ಗಳನ್ನು ಖರೀದಿಸಲು ಬೆಂಗಳೂರು ನಾಗರೀಕರನ್ನು ಆಕರ್ಷಿಸಿತು.  ತಮ್ಮ ಪ್ರತಿನಿಧಿಗಳು ಮತ್ತು ಭರವಸೆಗಳ ಸಂದರ್ಬದಲ್ಲಿ ಎದುರುದಾರರು ಬೆಂಗಳೂರು ನಗರದ ವಿವಿಧ ಸ್ಥಳಗಳಲ್ಲಿ ನಿವೇಶನ/ಪ್ಲಾಟ್‍ಗಳ ಹಂಚಿಕೆಗಾಗಿ ಸಾರ್ವಜನಿಕರನ್ನು ಪ್ರಾಮಾಣಿಕವಾಗಿ ಪ್ರೇರೇಪಿಸಿತು.  ಉದ್ದೇಶ ಪೂರ್ವಕವಾಗಿ ಮತ್ತು ಅಪ್ರಾಮಾಣಿಕವಾಗಿ ನಕಲಿ ದಾಖಲೆಗಳನ್ನು ಅಸಲಿ ಎಂದು ಬಳಸಿಕೊಂಡು ವಂಚನೆ ಮಾಡಿದೆ.  ಮತ್ತು ದೂರುದಾರರಿಗೆ ಸಾರ್ವಜನಿಕರಿಗೆ ವಂಚನೆ ಮಾಡಿದೆ.
3. ದೂರುದಾರರು ಗೃಹ ಕಲ್ಯಾಣ “ಸೂರ್ಯಕಾಂತಿ” ಎಂಬ ಉದ್ದೇಶಿತ ಯೋಜನೆಯನ್ನು 30 40 ನಿವೇಶನ 1200 ಚದುರು ಅಡಿಗಳನ್ನು ಬೆಂಗಳೂರು ನಗರದ ಅನೇಕಲ್ ತಾಲ್ಲೂಕಿನ ಅತ್ತಿಬೆಲೆ ಹೋಬಳಿಯ ಯಾದವನಹಳ್ಳಿ ಗ್ರಾಮದಲ್ಲಿ ಒಟ್ಟು ರೂ.9,00,000/- ಗಳಿಗೆ ಮಾರಾಟ ಮಾಡುವುದಾಗಿ ತಿಳಿಸಲಾಗಿ ಈ ಬಾಬ್ತು ರೂ.4,00,000/- ಗಳನ್ನು ವಿವಿಧ ದಿನಾಂಕಗಳಲ್ಲಿ ಪಾವತಿಸಿರುತ್ತಾರೆ.  ಈ ಸಂಬಂಧ ದಿನಾಂಕ 21.11.2016ರಂದು ಎಂ.ಓ.ಯು. ಕರಾರು ಪತ್ರವನ್ನು ಮಾಡಿಕೊಂಡಿರುತ್ತಾರೆ. ಉಳಿದ ಬಾಕಿ ಮೊತ್ತವನ್ನು ನೋಂದಣಿ ಸಮಯದಲ್ಲಿ ಪಾವತಿಸುವಂತೆ ಒಪ್ಪಿಕೊಂಡು.  ಇದಕ್ಕೆ ಪ್ರತಿಯಾಗಿ ಎದುರುದಾರರು ಬುಕಿಂಗ್ ಫಾರ್ಮ್ ನಂ.7798 ಮತ್ತು ಮೆಮೊರ್ಯಾಂಡಮ್ ಆಫ್ ಅಂಡರ್‍ಸ್ಟ್ಯಾಂಡಿಂಗ್ ನೀಡಿರುತ್ತಾರೆ. ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವುದಾಗಿ ತಿಳಿಸಿ 12 ತಿಂಗಳು ಮತ್ತು ಹೆಚ್ಚಿನ 3 ತಿಂಗಳ ಅವಧಿ ಮುಗಿದಿದ್ದರೂ ಯಾವುದೇ ನಿರ್ಮಾಣ ಕಾರ್ಯ ಪ್ರಾರಂಭಿಸದೇ ದೂರುದಾರರು ಇದರ ಬಗ್ಗೆ ವಿಚಾರಿಸಿದಾಗ ಎದುರುದಾರರು ದೂರುದಾರರಿಗೆ ವಿನಂತಿ ಮತ್ತು ಸೂಚನೆ ಮೇರೆಗೆ ದೂರುದಾರರು ರದ್ದಗೊಳಿಸುವ ಫಾರಂ ಅನ್ನು ತುಂಬಿ ಎಲ್ಲಾ ಮೂಲ ದಾಖಲೆಗಳನ್ನು ಹಿಂದಿರುಗಿಸಿದರು, ದೂರುದಾರರಿಗೆ ಮುಂಗಡ ಮೊತ್ತವನ್ನು ಬಡ್ಡಿಯೊಂದಿಗೆ ಪಾವತಿಸುವ ಭರವಸೆ ನೀಡಿದರು. ಯಾವುದಕ್ಕೂ ಪ್ರತಿಕ್ರಯಿಸದೇ, ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿ ಅಂತಿಮವಾಗಿ ಖದ್ದು ಕಂಪನಿಗೆ ಬೇಟಿ ನೀಡಿ, ಕಾಮಗಾರಿ ಅಭಿವೃದ್ದಿ ಪಡಿಸುವ ಉದ್ದೇಶ ಹೊಂದಿಲ್ಲವೆಂದು ತಿಳಿದು ಅಂತಿಮವಾಗಿ ಮಡಿವಾಳ ಪೋಲೀಸ್ ಠಾಣೆ ದೂರು ಸಲ್ಲಿಸಿದ್ದು, ಕರ್ನಾಟಕ ರಾಜ್ಯ ಸಿ.ಓ.ಡಿ ಗೆ ಪೋಲೀಸರು ವಹಿಸಿಕೊಟ್ಟಿದ್ದು,  ಅಂತಿಮವಾಗಿ ದೂರುದಾರರು ದಿನಾಂಕ 11.02.2019ರಂದು ಕಾನೂನು ನೋಟೀಸ್ ನೀಡಿ ಇದಕ್ಕೆ ಯಾವುದೇ ಜವಾಬು ಸಿಗದೆ ಮಾನಸಿಕವಾಗಿ ಮತ್ತು ದೈಹಿಕವಾಗಿ ನೊಂದು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಮತ್ತು ಅನುಚಿತ ವ್ಯಾಪಾರ ಪದ್ದತಿಯನ್ನು ಅನುಸರಿಸಿ ಮೋಸ ಮಾಡಿದ್ದಾರೆಂದು ಈ ಆಯೋಗಕ್ಕೆ ದೂರನ್ನು ಸಲ್ಲಿಸಿ ಎದುರುದಾರರಿಂದ ಪರಿಹಾರ ಕೊಡಿಸಬೇಕೆಂದು ಕೋರಿರುತ್ತಾರೆ.    
4. ದೂರನ್ನು ಅಂಗಿಕರಿಸದ ಬಳಿಕ ಎದುರುದಾರರು ನೋಟೀಸ್ ನೀಡಲಾಗಿತ್ತು ಮತ್ತು ಪತ್ರಿಕಾ ಪ್ರಕಟಣಾ ಮೂಲಕ ನೋಟೀಸ್ ನೀಡಲಾಯಿತು, ಆದರೂ ಎದುರುದಾರರು ಹಾಜರಾಗದೆ ಇದ್ದಕಾರಣ ಅವರನ್ನು ಏಕಪಕ್ಷೀಯವಾಗಿ ಇಡಲಾಗಿದೆ.
5. ದೂರುದಾರರು ಪ್ರಮಾಣಿಕೃತ ಸಾಕ್ಷ್ಯವನ್ನು ಮತ್ತು ದಾಖಲೆಗಳನ್ನು ಹಾಜರುಪಡಿಸಿ ಎಕ್ಷಿಬಿಟ್ 1ರಿಂದ 4 ಎಂದು ಗುರುತಿಸಲಾಗಿದ್ದು,  ಸಾಕ್ಷ್ಯಾದಾರಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ತೀರ್ಪಿಗಾಗಿ ಇಡಲಾಗಿದೆ.
6. ಈ ಕೆಳಕಂಡ ಅಂಶಗಳು ನಮ್ಮ ತೀರ್ಮಾನಕ್ಕಾಗಿ ಮೂಡಿ ಬಂದಿವೆ.
(1) ದೂರುದಾರರು, ಎದುರುದಾರರ ಕರ್ತವ್ಯ ಲೋಪ, ಅನುಚಿತ ವ್ಯಾಪಾರ, ದುರ್ನಡತೆಯನ್ನು, ನಿರ್ಲಕ್ಷತೆಯ£ ಸಾಬೀತು ಪಡಿಸಿದ್ದಾರೆಯೇ? ಹಾಗಿದ್ದಲ್ಲಿ ಆತ ಕೇಳಿಕೊಂಡ ಪರಿಹಾರಕ್ಕೆ ಅರ್ಹರೇ? 
(2) ಆದೇಶ ಏನು?
7. ಮೇಲ್ಕಂಡ ಅಂಶಗಳನ್ನು ಈ ಕೆಳಕಂಡ ಕಾರಣಕ್ಕಾಗಿ ಈ ರೀತಿ ನಿರ್ಣಯಿಸಿದ್ದೇವೆ.
1ನೇ ಅಂಶ - ಭಾಗಶ: ಸಕಾರಾತ್ಮಕವಾಗಿ
2ನೇ ಅಂಶ - ಅಂತಿಮ ತೀರ್ಪಿನ ಪ್ರಕಾರ
ಕಾರಣಗಳು
8. 1ನೇ ಅಂಶದ ಮೇಲೆ:- ದೂರುದಾರರು ತನ್ನ ದೂರಿನಲ್ಲಿ ಕೊಟ್ಟ ಸಂಗತಿಗಳನ್ನು ನಾವು ಈಗಾಗಲೇ ಸುದೀರ್ಘವಾಗಿ ಪ್ಯಾರಾ-2ರಲ್ಲಿ ವಿವರಿಸಿದ್ದೇವೆ.  ಪ್ರಸ್ತುತ ಪ್ರಕರಣದಲ್ಲಿ ಎದುರುದಾರರು ಈ ವೇದಿಕೆಯಿಂದ ಕಳುಹಿಸಿದ ನೋಟೀಸ್ ಜಾರಿಯಾಗಿದ್ದರೂ ಕೂಡ ಈ ವೇದಿಕೆಯ ಮುಂದೆ ಹಾಜರಾಗದೆ, ಗೈರು ಹಾಜರಾಗಿದ್ದು, ಆ ಕಾರಣಕ್ಕಾಗಿ ಅವರನ್ನು ಏಕಪಕ್ಷೀಯ ಎಂದು ನಿರ್ಣಯಿಸಿ, ದೂರುದಾರರು ತನ್ನ ಅಹವಾಲನ್ನು ಸಾಬೀತು ಪಡಿಸುವ ಕುರಿತು ಪ್ರಮಾಣ ಪತ್ರವನ್ನು ಸಲ್ಲಿಸಿರುತ್ತಾರೆ ಮತ್ತು ಪ್ರಮಾಣ ಪತ್ರಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿದ್ದು, ಅವುಗಳನ್ನು ಪುನ: ವಿರ್ಮಶಿಸುವ ಪ್ರಮೇಯ ಉದ್ಫವಿಸುವುದಿಲ್ಲ. ದೂರುದಾರರು ಹಾಕಿಕೊಂಡ ದೂರಿನಲ್ಲಿನ ಅಂಶಗಳನ್ನು ಎದುರುದಾರರು ಈ ಆಯೋಗದ ಮುಂದೆ ಹಾಜರಾಗಿ ಅಲ್ಲಗಳೆಯದೆ ಇರುವುದರಿಂದ ಆತ ದೂರಿನಲ್ಲಿ ಹೇಳಿದ ಸಂಗತಿಗಳು ನಿಜವೆಂದು ಅಭಿಪ್ರಾಯಕ್ಕೆ ಬರಬಹುದು ಎಂದು ಮಾನ್ಯ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು  2018 (1) CPR 314 (NC) in the case of M/s.Singla Builders & Promoters Ltd., vs. Aman Kumar Garg ಪ್ರಕರಣದಲ್ಲಿ ಉಲ್ಲೇಖಿಸಿರುತ್ತಾರೆ. 
9. ದೂರುದಾರರು ತಮ್ಮ ಪ್ರಕರಣವನ್ನು ಸಾಬೀತು ಪಡಿಸಲು ಸಾಕ್ಷ್ಯಗಳು ಮತ್ತು ದಾಖಲೆ ಎಕ್ಸಿಬಿಟ್ ಪಿ.1 ರಿಂದ ಪ.4 ಹಾಜರು ಪಡಿಸಿದ್ದು, ಪ್ಲಾಟ್‍ನ ಮುಂಗಡ ಮೊತ್ತವನ್ನು ವಿವಿಧ ದಿನಾಂಕಗಳಲ್ಲಿ ಒಟ್ಟು ರೂ.4,00,000/- ಗಳನ್ನು ಪಾವತಿಸಿರುತ್ತಾರೆ. ಇದಕ್ಕೆ ಎದುರುದಾರರು ಬುಕಿಂಗ್ ಫಾರಂ ಪಡೆದು ನಿಶಾನೆ ಪಿ.1 ಮತ್ತು ಎಂ.ಓ.ಯು ಪಡೆದುಕೊಂಡು ನಿಶಾನೆ ಪಿ.2 ಎಂದು ಗುರುತಿಸಲಾಗಿದೆ ಎಂ.ಓ.ಯು ಕರಾರಿನಂತೆ ಪ್ಯಾರಾ 1ಎ ಯಿಂದ ಡಿ ವರೆಗೆ ಹಣ ಪಾವತಿಸಿದ್ದು, ಆದರೂ ಎದುರುದಾರರು ನಿರ್ಮಾಣ ಕಾರ್ಯವನ್ನು ಪ್ರಾರಂಭಿಸದೇ ಮತ್ತು ಕಾರಣವನ್ನು ತಿಳಿಸದೇ ದೂರುದಾರರಿಗೆ ಮಾನಸಿಕ ಹಿಂಸೆ ಮತ್ತು ದೈಹಿಕ ತೊಂದರೆಯನ್ನು ಕೊಟ್ಟಿದ್ದು, ಇದರಿಂದ ನೊಂದು ಪೋಲೀಸ್ ಠಾಣೆಗೆ ದೂರು ನೀಡಿದ್ದು, ಕರ್ನಾಟಕ ಸಿ.ಓ.ಡಿ.ಗೆ ಕಳುಹಿಸಿದ್ದು, ದೂರುದಾರರು ಸತತ ಪ್ರಯತ್ನ ಮಾಡಿದರೂ ವಿಫಲರಾಗಿ ಅಂತಿಮವಾಗಿ ದಿನಾಂಕ 11.02.2019ರಂದು ಕಾನೂನು ನೋಟೀಸನ್ನು ಕಳುಹಿಸಿದ್ದು ನಿಶಾನೆ ಪಿ.3 ಮತ್ತು ಸದರಿ ನೋಟೀಸ್ ಹಿಂದಿರುಗಿದ್ದು, ನಿಶಾನೆ ಪಿ4ರಲ್ಲಿ ಹಾಜರು ಪಡಿಸಿರುತ್ತಾರೆ. ಆದ್ದರಿಂದ ನೊಂದು ಎದುರುದಾರರು ಸೇವಾ ನ್ಯೂನತೆ ಎಸಗಿದ್ದಾರೆಂದು ವ್ಯಾಪಾರ ದುರ್ನಡತೆ ಎಸಗಿದ್ದಾರೆಂದು ದೂರುದಾರರು ಈ ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ. 
10. ದೂರುದಾರರು ಎದುರುದಾರರ ಜೊತೆ ಮಾಡಿಕೊಂಡ ಕರಾರು ಪತ್ರ, ಎಂ.ಓ.ಐ ಷರತ್ತುಗಳು – 5 default clause ನ ಇ ಮತ್ತು ಡಿ ಅನ್ನು ಈ ರೀತಿ ಓದಲಾಗಿದೆ:

(

(e) The first part has agreed that if the first party fails to get all necessary approvals/permission from the concerned authorities or the said joint venture is cancelled due to the reason beyond the control of the first party or any vis/force majeure, the same shall be intimated to the second party in writing and the second party may choose to contribute in any other joint venture of the first party as per the terms and condtions of property rates prevailing at that time or the first party will refund the amount paid, to the second party within 75 days from the date of procedure for termination/cancellation is processed.

 

(d) The first party also agreed that in the event of any delay beyond the duration specified i.e. twelve (12) months and a grace period of three (3) months, as mentioned Clause 2(a), the second party may withdraw himself/herself/themselves from the said joint venture, the second party my choose to contribute in any other joint ventures of the first party as per its terms and conditions and contribution rates/ratio prevailing at that time or the first party shall refund the amount paid by the second party along with the amount accumulated in the credit note/details maintained in the name of the second party, within the 30 days from the date of withdrawal is processed.

 
11. ದೂರುದಾರರು ಸಂಬಂಧಪಟ್ಟ ದಾಖಲೆಗಳನ್ನು ನಿಶಾನೆ 1ರಿಂದ 4 ಹಾಜರು ಪಡಿಸಿ, ಪ್ರಕರಣ ಸಾಬೀತು ಪಡಿಸಿರುತ್ತಾರೆ.  ಇದಕ್ಕೆ ಎದುರುದಾರರ ಪೂರ್ವಕವಾಗಿ ಯಾವುದೇ ಮಾಹಿತಿ ನೀಡದೆ ಇರುವುದರಿಂದ, ಅನಿವಾರ್ಯವಾಗಿ ಈ ಆಯೋಗದ ಮೆಟ್ಟಲು ಹತ್ತುವ ಪ್ರಸಂಗ ಬಂದಿದೆ ಎಂದು ಉಲ್ಲೇಖಿಸಿರುವ ಅಂಶ ಸತ್ಯವೆಂದು ಕಂಡು ಬರುತ್ತದೆ.  ಈ ದೂರಿಗೆ ಎದುರುದಾರರು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದೆ ಮತ್ತು ಅಲ್ಲಗಳೆಯದೇ ಇರುವುದರಿಂದ ದೂರುದಾರರು ಹೇಳಿದ ಸಂಗತಿಗಳು ಸತ್ಯವೆಂದು ಅಭಿಪ್ರಾಯಕ್ಕೆ ಬಂದಿದ್ದು, ದೂರುದಾರರು ಎದುರುದಾರರಿಗೆ ಕೊಟ್ಟ ಮುಂಗಡ ಮೊತ್ತ ರೂ.4,00,000/- ಗಳನ್ನು ಶೇಕಡ 9%ರ ಬಡ್ಡಿಯೊಂದಿಗೆ ಮರುಪಾವತಿಸುವಂತೆ ನಿರ್ದೇಶಿಸಿ, ಪರಿಹಾರ ರೂಪವಾಗಿ ರೂ.25,000/-ಗಳನ್ನು ಹಾಗೂ ಮಾನಸಿಕ ಹಿಂಸೆ, ದೈಹಿಕವಾಗಿ ಮತ್ತು ಸಮಯದ ನಷ್ಟಕ್ಕಾಗಿ ರೂ.10,000/- ಗಳನ್ನು ಕೊಡಲು ನಿರ್ಣಯಿಸಿದ್ದೇವೆ.  ಈ ಕಾರಣಕ್ಕಾಗಿ 1ನೇ ಅಂಶ ಭಾಗಶ: ಸಕಾರಾತ್ಮಕ ಎಂದು ತೀರ್ಮಾನಿಸಲಾಗಿದೆ.  
12. 2ನೇ ಅಂಶದ ಮೇಲೆ:- 1ನೇ ಅಂಶದಲ್ಲಿ ಕೊಟ್ಟಿರುವ ನಿರ್ಣಯಕ್ಕೆ ಅನುಗುಣವಾಗಿ ಈ ಕೆಳಕಂಡ ಆದೇಶವನ್ನು ಮಾಡಿದ್ದೇವೆ. 
ಆದೇಶ
1. ಗ್ರಾಹಕ ಸಂರಕ್ಷಣಾ ಕಾಯಿದೆ 1986ರ ಕಲಂ 12 ರ ಅನ್ವಯ ದೂರನ್ನು ಭಾಗಶ: ಪುರಸ್ಕರಿಸಲಾಗಿದೆ.
2. ಎದುರುದಾರರು ದೂರುದಾರರಿಗೆ ರೂ.4,00,000/- ಮುಂಗಡ ಹಣವನ್ನು ಶೇಕಡ 9%ರ ಬಡ್ಡಿಯೊಂದಿಗೆ ಮರುಪಾವತಿಸುವಂತೆ ನಿರ್ದೇಶಿಸಿಲಾಗಿದೆ ಮತ್ತು ಸೇವಾ ನ್ಯೂನತೆಗಾಗಿ ಪರಿಹಾರ ರೂಪವಾಗಿ ರೂ.25,000/-ಗಳನ್ನು ಮತ್ತು ಮಾನಸಿಕ ಹಿಂಸೆ, ದೈಹಿಕವಾಗಿ ಮತ್ತು ಸಮಯದ ನಷ್ಟಕ್ಕಾಗಿ ರೂ.10,000/-ಗಳನ್ನು ಈ ಆದೇಶ ಆದ 60 ದಿನಗೊಳಗಾಗಿ ಸದರಿ ಹಣವನ್ನು ದೂರುದಾರರಿಗೆ ಪಾವತಿಸತಕ್ಕದ್ದು.  ತಪ್ಪಿದಲ್ಲಿ ದೂರು ಸಲ್ಲಿಸಿದ ದಿನಾಂಕದಿಂದ ರೂ.4,00,000/- ಗಳಿಗೆ ಶೇಕಡ 12%ರ ಬಡ್ಡಿಯಂತೆ ಮರುಪಾವತಿಯಾಗುವವರೆಗೆ ವಸೂಲಿ ಮಾಡಿಕೊಳ್ಳು ಆದೇಶಿಸಿದೆ.
3. ಉಭಯತ್ರರಿಗೆ ಹೆಚ್ಚುವರಿ ದಾಖಲೆಗಳನ್ನು ಹಿಂತಿರುಗಿಸಲು ಸೂಚಿಸಿದೆ.
4. ಈ ಆದೇಶದ ಪ್ರತಿಗಳನ್ನು ನಿಯಮಾನುಸಾರ ಉಭಯಪಕ್ಷಕಾರರಿಗೆ ಉಚಿತವಾಗಿ ನೀಡತಕ್ಕದ್ದು. 
 
(ಶೀಘ್ರಲಿಪಿಗಾರರಿಗೆ ಉಕ್ತಲೇಖನ ನೀಡಿ, ಬೆರಳಚ್ಚು ಮಾಡಿಸಿ, ತಪ್ಪುಗಳನ್ನು ನೋಡಿ ಸರಿಪಡಿಸಿ ಅಂತಿಮ ಆದೇಶವನ್ನು 30ನೇ ನವೆಂಬರ್ 2022 ರಂದು ತೆರೆದ ನ್ಯಾಯಾಲಯದಲ್ಲಿ ಘೋಷಿಸಲಾಯಿತು)
 
(ರೇಣುಕಾದೇವಿ ದೇಶ್‍ಪಾಂಡೆ)ಮಹಿಳಾ ಸದಸ್ಯರು
(ಎಂ.ಶೋಭಾ)ಅಧ್ಯಕ್ಷರು
 
ಅನುಬಂಧ
ಪಿರ್ಯಾದುದಾರರ ಪರ ವಿಚಾರಣೆ ಮಾಡಿದ ಸಾಕ್ಷಿಗಳ ಪಟ್ಟಿ
ಕ್ರ.ಸಂ ವಿವರ
1. 1 ಪಿ.ಸಾಕ್ಷಿ-1 – ಬುಕಿಂಗ್ ಪಾರಂನ ಪ್ರತಿ
2. 2 ಪಿ.ಸಾಕ್ಷಿ-2 – ಮೆಮೊರ್ಯಾಂಡಮ್ ಆಫ್ ಅಂಡರ್‍ಸ್ಟ್ಯಾಂಡಿಂಗ್ ದಿ.21.11.2016 ರ ಪ್ರತಿ
3. 3 ಪಿ.ಸಾಕ್ಷಿ-3 – ಲೀಗಲ್ ನೋಟೀಸ್ ದಿ.11.02.2019
4. 4 ಪಿ.ಸಾಕ್ಷಿ –4 – ಹಿಂದಿರುಗಿದ ಪೋಸ್ಟ್ ಕವರ್
 
 
(ರೇಣುಕಾದೇವಿ ದೇಶ್‍ಪಾಂಡೆ)
ಮಹಿಳಾ ಸದಸ್ಯರು
(ಎಂ ಶೋಭಾ)
ಅಧ್ಯಕ್ಷರು
 
 
[HON'BLE MRS. M. SHOBHA]
PRESIDENT
 
 
[HON'BLE MS. Renukadevi Deshpande]
MEMBER
 

Consumer Court Lawyer

Best Law Firm for all your Consumer Court related cases.

Bhanu Pratap

Featured Recomended
Highly recommended!
5.0 (615)

Bhanu Pratap

Featured Recomended
Highly recommended!

Experties

Consumer Court | Cheque Bounce | Civil Cases | Criminal Cases | Matrimonial Disputes

Phone Number

7982270319

Dedicated team of best lawyers for all your legal queries. Our lawyers can help you for you Consumer Court related cases at very affordable fee.